ಕೆ.ಆರ್.ನಗರ (ಮೈಸೂರು ಜಿಲ್ಲೆ ): ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅವರುಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದಾಗ ಅವರು ಮತ್ತಷ್ಟು ಉತ್ತೇಜನದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈದ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.


ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೃಜನ ಲೇಖಕರು ಮತ್ತು ಕಲಾವಿದರ ಬಳಗದ 23ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಚಾರ ಪ್ರಜ್ಞೆ ಪಾಕ್ಷಿಕ ಪತ್ರಿಕೆಯ 8ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ
ಅಂಗವಾಗಿ ಆಯೋಜಿಸಿದ್ದ ಸೃಜನ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ಸದಾ ಸಮಾಜ ಮುಖಿಯಾಗಿ ಕೆಲಸ ಮಾಡಬೇಕಾಗಿದೆ. ಈ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಮಾಡುವವರನ್ನು ಗುರುತಿಸಿ ಅವರನ್ನು ಗೌರವಿಸುತ್ತಿರುವುದು ಹಾಗೂ ಎಲೆ ಮರೆಯ ಕಾಯಿಯಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿರುವ ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಮೂಳೆ ತಜ್ಞ ವೈದ್ಯ
ಡಾ.ಕೆ.ಆರ್.ಗೌತಮ್ ಮಾತನಾಡಿ ನಕರಾತ್ಮಕವಾಗಿರುವುದು ಬಹುಬೇಗ ನಮಗೆ ಕಾಣಿಸುತ್ತದೆ ಹಾಗಾಗಿ ನಾವುಗಳು ವಯಸ್ಸಿಗಿಂತ ವಿವೇಕದಿಂದ ದೊಡ್ಡವರಾಗಬೇಕು ಎಂದರು.
ಬೇರೆಯವರು ನೀಡಿದ ಈ ಜೀವನವನ್ನು ಸರಿಯಾಗಿ ಬಳಸಬೇಕು. ನಿರ್ಗತಿಕರಿಗಾಗಿ ಬದುಕಿ ನಿಜವಾದ ಜೀವನದ ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ಒಳ್ಳೆಯ ಕೆಲಸಗಳನ್ನು ಮಾಡೋಣ ಒಳ್ಳೆಯವರಾಗಿ ಬದುಕು ನಡೆಸೋಣ ಎಂದರು.
ಸಾಲಿಗ್ರಾಮ ತಾಲೂಕು ಪಂಚಾಯಿತಿ
ಇಓ ಎ.ಎನ್.ರವಿಯವರು ಮಾತನಾಡಿ ಒಂದು ಪತ್ರಿಕೆಯನ್ನು ನಡೆಸುವುದೆಂದರೆ ಅದೊಂದು ಸಾಮಾಜಿಕ ಹೊಣೆಗಾರಿಕೆ ಬಹಳ ದೊಡ್ಡ ಜವಾಬ್ದಾರಿ ಎಂದರು.
ಸಮಾಜದ ಎಲ್ಲಾ ಜನರಿಗೂ ಇಷ್ಟವಾಗುವ ರೀತಿಯಲ್ಲಿ ಪತ್ರಿಕೆಗಳಲ್ಲಿ ಲೇಖನಗಳು ಸೇರಿದಂತೆ ಬೇರೆ ಬೇರೆ ವಿಚಾರಗಳನ್ನು ತುಂಬಬೇಕಾಗುತ್ತದೆ. ಜನರಲ್ಲಿ ಓದುವ ಅಭಿರುಚಿ ಮತ್ತು ಸಂಸ್ಕೃತಿಯನ್ನು ಬೆಳೆಸಲಿಕ್ಕೆ ಪತ್ರಿಕೆಯು ಪೂರಕವಾಗಿರುವಂತೆ ಅದನ್ನ ರಚನೆ ಮಾಡಬೇಕಾಗಿರುತ್ತದೆ. ಆ ನಿಟ್ಟಿನಲ್ಲಿ ವಿಚಾರ ಪ್ರಜ್ಞೆ ಪಾಕ್ಷಿಕ ಪತ್ರಿಕೆಯು ಹೊರಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ
ಕೆ.ಟಿ.ಮೋಹನ್ ಕುಮಾರ್, ನಿವೃತ್ತ ತಹಶೀಲ್ದಾರ್ ಕೆ.ಎಸ್.ಬಾಲಸುಬ್ರಮಣ್ಯ, ಕಣ್ಣಿನ ತಜ್ಞ ವೈದ್ಯ ಡಾ.ಟಿ.ಎಸ್.ದೀಪ್ತಿ, ಪೊಲೀಸ್ ಪೇದೆ ಹೆಚ್.ಎಸ್.ವಿಜಯ್, ಪೌರಕಾರ್ಮಿಕ ರವಿ, ಪಶುವೈದ್ಯ ಹಿರಿಯ ಪರೀಕ್ಷಕ ಚಿಕ್ಕಣ್ಣೇಗೌಡ, ಅಂಗನವಾಡಿ ಕಾರ್ಯಕರ್ತೆ ಹೇಮಲತಾ, ಅಂಚೆ ನೌಕರ ಹರೀಶ್ ಕುಮಾರ್, ಪ್ರತಿಭಾವಂತ ವಿದ್ಯಾರ್ಥಿ ಎಸ್.ಕಿರಣ್, ಪ್ರಗತಿಪರ ರೈತ ಮಹಿಳೆ ಅನುಸೂಯ, ಈಜುಗಾರ ಪ್ರಸಾದ್, ಪುರೋಹಿತ ಮಹದೇವ ಸೇರಿದಂತೆ 32 ಜನ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ ಸೃಜನ ಸದ್ಭಾವನಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಡಾ.ಬಿ.ಜೆ.ನವೀನ್ ಕುಮಾರ್, ಡಾ.ಪಿ.ಜನಾರ್ಧನ್ ಭಟ್, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಶಿವಪ್ರಕಾಶ್, ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷ ರಾ.ಸುರೇಶ್, ಮೆಗ್ನಟಾಸ್ ಸೆಕ್ಯೂರಿಟಿ ಏಜೆನ್ಸಿ ವ್ಯವಸ್ಥಾಪಕ ಕೆ.ಇ.ಮಹೇಶ್, ಕಾಂಗ್ರೆಸ್ ಮುಖಂಡ ಮಹೇಶ್ ಕುಮಾರ್, ಕನ್ನಡ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ತಿಮ್ಮಶೆಟ್ಟಿ, ನವನಗರ ಬ್ಯಾಂಕ್ ನಿರ್ದೇಶಕ ಅಶೋಕ್ ಕುಮಾರ್, ರೋಟರಿ ಅಧ್ಯಕ್ಷ
ಟಿ.ಎನ್.ದಯಾನಂದ, ಶ್ರೀನಿವಾಸಗೌಡ, ಪತಂಜಲಿ ಯೋಗಾಶ್ರಮ ಟ್ರಸ್ಟ್ ಅಧ್ಯಕ್ಷ ಪಿ.ಆರ್.ವಿಶ್ವನಾಥಶೆಟ್ಟಿ, ನಿವೃತ್ತ ಪ್ರಾಂಶುಪಾಲ ಕೃಷ್ಣ, ಚುಟುಕು ಸಾಹಿತಿ ಹೆಗ್ಗಂದೂರುಪ್ರಭಾಕರ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.