ಚಳ್ಳಕೆರೆ ಅ.24ಶೇಂಗಾ ಬೆಳೆಗೆ ಬುಡಕೊಳೆರೋಗ ಎಲೆ ಚುಕ್ಕೆ ರೋಗ ತಗುಲಿದ್ದರಿಂದ ಬೆಳೆಯ ಇಳುವರಿ ಕುಸಿತ ಹಾಗೂ ಸಂಪೂರ್ಣ ಬೆಳೆ ಕೈಕೊಡುವ ಆತಂಕದಲ್ಲಿಅನ್ನದಾತರು.
ಹೌದು ಇದು ಚಳ್ಳಕೆರೆ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಬಡವರ ಬಾದಮಿ ಒಂದು ವಾರದಿಂದ ಸುರಿದ ಅಕಾಲಿಕ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು ಕೊಳೆರೋಗಕ್ಕೆ ಶೇ75 ರಷ್ಟು ಬೆಳೆ ಹಾಳಾಗಿದ್ದು ಭೂಮಿಯಲ್ಲಿನ ತೇವಾಂಶ ಮುಗಿಯುವಷ್ಟರಲ್ಲಿ ಸಂಪೂರ್ಣ ಬೆಳೆ ಹಾಳಗಾಲಿದೆ.
ರೈತ ಗೋಪನಹಳ್ಳಿ ರಾಜಣ್ಣ ಮಾತನಾಡಿ ಶೇಂಗಾ ಬೀಜಗೊಬ್ಬರ ಸೇರಿ ಸುಮಾರು ಒಂದು ಲಕ್ಷ ಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದೇನೆ ಬೆಳೆ ರೋಗಕ್ಕೆ ತುತ್ತಾಗಿದೆ ಗಿಡದಲ್ಲಿ ಒಂದು ಎರಡು ಕಾಯಿ ಕಟ್ಟಿದೆ ಅವು ಸಹ ಮೊಳಕೆ ಬಂದಿವೆ ಬೆಳೆ ವಿಮೆ ಕಟ್ಟಲಾಗಿದೆ ಸಹಾಯವಾಣಿಗೆ ಕರೆ ಮಾಡಿದರೆ ಹೋಗುತ್ತಿಲ್ಲ ಏನೂ ತೋಚದಂತಾಗಿದೆ ಬೆಳೆ ನಷ್ಟದಿಂದ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆಎಂದು ರೈತ ರಾಜಣ್ಣ ಅಳಲು ತೋಡಿಕೊಂಡಿದ್ದಾರೆ.
ಶೇಂಗಾ ಬೆರಳೆ ಈ ಅತಿ ಎತ್ತರ ಬೆಳೆದು ಇಳುವರಿ ಕನಸು ಕಂಡಿದ್ದ ರೈತರಿಗೆ ಅಕಾಲಿಕ ಮಳೆಯಿಂದ ಬೆಳೆಯ ಇಳುವರಿ ಕುಸಿತವಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಹಾಗೂ ಬೆಳೆ ವಿಮೆ ಕೊಡಿಸುವರೇ ಕಾದು ನೋಡ ಬೇಕಿದೆ.














ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಗ್ರಾಮದ. ರಾಜಣ್ಣ ಇವರ ಜಮೀನಿನಲ್ಲಿ ಬೆಳೆ ಶೇಂಗಾ ಬೆಳೆಗೆ ರೋಗ
About The Author
Discover more from JANADHWANI NEWS
Subscribe to get the latest posts sent to your email.