July 18, 2026
images (1)

ಎಲ್ಲರಿಗೂ ಅಮ್ಮನಂತಿದ್ದರು

ಚಿತ್ರದುರ್ಗ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರ ನಿಧನ
ಅತ್ಯಂತ ದುಃಖ ತರಿಸಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

2005-06ರಲ್ಲಿ ಶಾಸಕನಾಗಿದ್ದ ವೇಳೆ ಬೆಂಗಳೂರಿನ ಅವರ ನಿವಾಸಕ್ಕೆ ಭೇಟಿ ನೀಡಿದ್ದ
ವೇಳೆ ಜನ್ಮನೀಡಿದ ತಾಯಿಯಂತೆಯೇ ಪ್ರತಿಯನ್ನು ಧಾರೆಯೆರೆದಿದ್ದಾರೆ.
ಅವರ ಕುಟುಂಬದ ಸದಸ್ಯರೆಲ್ಲರೊಂದಿಗೆ ನನ್ನನ್ನು ಕೂರಿಸಿ ಊಟ ಬಡಿಸಿದ ಪ್ರೀತಿ ಮರೆಯಲಾಗದು. ನನ್ನಷ್ಟೇ ಅಲ್ಲದೆ ಅವರ ಮನೆಗೆ ಭೇಟಿ ನೀಡುತ್ತಿದ್ದ ಎಲ್ಲರನ್ನೂ ತಮ್ಮ ಮಕ್ಕಳೆಂಬ ಭಾವನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರು.
ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅವರು ರಾಜಕೀಯ ಜೀವನದಲ್ಲಿ
ಸಾಧನೆ ಮಾಡಲು ಚನ್ನಮ್ಮ ಅವರ ತ್ಯಾಗ ಬಹಳಷ್ಟು ಇದೆ. ಸದ್ಗುಣ, ಎಲ್ಲರನ್ನೂ ಸಮಾನವಾಗಿ
ಕಾಣುತ್ತಿದ್ದ ಅವರ ಹೃದಯವಂತಿಕೆ ಸ್ಮರಣೀಯ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ದೊರೆಯಲಿ ಎಂದು ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading