June 17, 2026
IMG-20260617-WA0195

ವರದಿ: ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ತಾಲೂಕಿನ ಸರ್ಕಾರಿ ಶಾಲೆಗಳಿಗೆ ೨೦೨೬-೨೭ ನೇ ಸಾಲಿಗೆ ಶಿಕ್ಷಣ ಇಲಾಖೆಯಿಂದ ಸರಬರಾಜು ಆಗಿರುವ ಉಚಿತ ಸಮವಸ್ತ್ರ ವಿತರಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೊಸಿನ್ ಪಟ್ಟಣದ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಬಾಲಕರು ೫೬೭೨ ಹಾಗೂ ಬಾಲಕಿಯರು ೫೧೩೦. ಒಟ್ಟು ೧೦೭೦೨ ಸಮವಸ್ತ್ರ ಈ ಶೈಕ್ಷಣಿಕ ಸಾಲಿನಲ್ಲಿ ವಿತರಣೆ ಮಾಡಲಾಗುವುದು ಎಂದರು. ಬಿ ಆರ್ ಸಿ ಶ್ರೀನಿವಾಸ್. ಟಿ ಪಿ ಈ ಓ. ಶ್ರೀನಿವಾಸ್ ಕಸಬಾ ಹೋಬಳಿಯ ಶಿಕ್ಷಣ ಸಂಯೋಜಕ ಎಮ್ ಶಶಿಧರ್. ಉಚಿತ ಸಮವಸ್ತ್ರ ನೋಡಲ್ ಅಧಿಕಾರಿಯ ಹಾಲೇಶ್. ಬಿ ಆರ್ ಪಿ ಗಳಾದ ರುದ್ರೇಶ್ ಸುರೇಂದ್ರ ನಾಯಕ್ ರಾಘವೇಂದ್ರ ಹೊಸದುರ್ಗ ಟೌನ್ ಕ್ಲಸ್ಟರ್ ನ ಸಿ ಆರ್ ಪಿ ಕೆ.ಮಂಜಪ್ಪ ಹಾಗೂ ಶಿಕ್ಷಕರು ಹಾಜರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading