
ಚಿತ್ರದುರ್ಗದ ಮಣ್ಣಿಗೆ ಸಾಂಸ್ಕೃತಿಕ ಮತ್ತು ಸ್ವಾಭಿಮಾನದ ಸ್ಪರ್ಶವನ್ನು ಕೊಟ್ಟಂತವರು ರಾಜ ವೀರ ಮದಕರಿ ನಾಯಕರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಅವರು ಭಾನುವಾರ ನಾಯಕನಹಟ್ಟಿ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಸಂಘ ಕಚೇರಿಯಲ್ಲಿ ಏರ್ಪಡಿಸಿದಂತಹ ರಾಜ ವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಮಾತನಾಡಿ ಜಗತ್ತು ಕಂಡಂತಹ ಅಪ್ರತಿಮ ಹೋರಾಟಗಾರ ಧೈರ್ಯ ಸಾಹಸ ಸ್ವಾಭಿಮಾನ ಮತ್ತು ಪರಧರ್ಮ ಸಹಿಷ್ಣುತೆಗೆ ಹೆಸರಾದಂತವರು ರಾಜ ವೀರ ಮದಕರಿ ನಾಯಕರು, ರಾಜಕೀಯ ಬಾಂಧವ್ಯ, ಹೋರಾಟ ದೂರ ದೃಷ್ಟಿ, ನಿರ್ಭಿತ ನಡೆ, ಮತ್ತು ಸ್ವಾಭಿಮಾನಕ್ಕೆ ಇನ್ನೊಂದು ಹೆಸರು ಮದಕರಿ ನಾಯಕರು, ಮರಾಠದ ಪೇಶ್ವೆಗಳು ಮತ್ತು ಮೈಸೂರು ಸಂಸ್ಥಾನದ ಬಾಂಧವ್ಯವನ್ನು ಚಾಣಾಕ್ಷತನದಿಂದ ಪಡೆದು ಹರಪನಹಳ್ಳಿ ರಾಯದುರ್ಗ ಸವಣೂರು ಮತ್ತು ಬಿದನೂರು ಸಂಸ್ಥಾನ ದ ಅರಸರುಗಳಿಗೆ ಸಿಂಹ ಸ್ವಪ್ನ ವಾಗಿದ್ದರು,ಕೊನೆಗೆ ಮದಕರಿ ನಾಯಕರಿಂದ ಸಹಾಯ ಪಡೆದ ಹೈದರಾಲಿಗೆ ಚಿತ್ರದುರ್ಗದ ಮೇಲೆ ಕಣ್ಣು ಬಿದ್ದು ನಾಲ್ಕು ಸಾರಿ ದಂಡೆತ್ತಿ ಬಂದರೂ ಕೂಡ ಮದಕರಿ ನಾಯಕರ ಸೈನ್ಯ ಹೈದರಾಲಿ ಸೈನ್ಯವನ್ನು ಧೂಳಿಪಟ ಮಾಡಿತು, ನೇರವಾಗಿ ಚಿತ್ರದುರ್ಗದ ಪಾಳ್ಳೇಗಾರರ ಸೈನ್ಯವನ್ನು ಎದುರಿಸಲು ಸಾಧ್ಯವಿಲ್ಲ ವೆಂಬ ಅಂಶವನ್ನು ಅರಿತ ಹೈದರಾಲಿ, ಮದಕರಿ ಸಂಸ್ಥಾನದಲ್ಲಿದ್ದಂತ ಕಳ್ಳಿ ನರಸಪ್ಪ ಮತ್ತು ಇತರೆಯವರ ಸ್ವಾರ್ಥ ಮತ್ತು ಕುಚೋದ್ಯದಿಂದ ಯುದ್ಧ ಸಾಮಗ್ರಿಗಳನ್ನು ಕುತಂತ್ರದಿಂದ ಮುಕ್ಕು ಮಾಡಿ ಇಡೀ ಸೈನ್ಯವನ್ನು ನಿತ್ರಾಣ ಗೊಳಿಸಿ ಕೊನೆಗೆ ಯುದ್ಧದಲ್ಲಿ ಸೋಲಬೇಕಾಯಿತು ಇಂತಹ ಪರಾಕ್ರಮಿಯದ ದೇಶಭಕ್ತನಾದ ಮತ್ತು ಸ್ವಾಭಿಮಾನಿಯಾದ ಮದಕರಿ ನಾಯಕ ಆದರ್ಶ ಮತ್ತು ಸ್ವಾಭಿಮಾನವನ್ನು ಇವತ್ತಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕಾಗಿದೆ ಇವತ್ತಿನ ಪ್ರಸ್ತುತದಲ್ಲಿ ಕತ್ತಿಯಿಂದ ಜಗತ್ತನ್ನಾಳುವ ಕಾಲ ಅಂತ್ಯವಾಗಿದ್ದು ಪೆನ್ನಿನಿಂದ ಜಗತ್ತನ್ನು ಅರಿಯುವ ಮತ್ತು ಆಳುವ ಕಾಲ ಬಂದಿದ್ದು ಈ ಜನಾಂಗದ ಪ್ರತಿ ಕುಟುಂಬದಲ್ಲಿ ಸಂಸ್ಕಾರ ಯುತವಾದಂತ ಮತ್ತು ಗುಣಮಟ್ಟದ ಶಿಕ್ಷಣವನ್ನು ತಪ್ಪದೇ ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ನೀಡುವ ಅಗತ್ಯವಿದ್ದು ಈ ದಿಸೆಯಲ್ಲಿ ಜನಾಂಗದ ಎಲ್ಲರೂ ಕೂಡ ಇಂದು ಸಂಕಲ್ಪ ಮಾಡಬೇಕಿದೆ ಎಂದರು.





ಇನ್ನೂ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಮಾತನಾಡಿ ಇದೀಗು ಜಿಲ್ಲೆಯ ಈ ಜನಾಂಗದವರು ಅತ್ಯಂತ ಪರಾಕ್ರಮಿಗಳು ಮತ್ತು ಸ್ವಾಭಿಮಾನಕ್ಕೆ ಹೆಸರಾದವರು ಹೆಚ್ಚು ಶೈಕ್ಷಣಿಕ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಮಾಡಬೇಕಿದೆ ನಾಯಕ ಜನಾಂಗವು ಹೇರಳವಾಗಿ ಜಾಸ್ತಿ ಇರುವಂತಹ ಈ ಜಿಲ್ಲೆಯಿಂದಲೇ ಸಾಮಾಜಿಕ ಬದಲಾವಣೆಯ ಚಿಂತನೆಯಾಗಬೇಕಿದೆ ಮದಕರಿ ನಾಯಕರು ಧೈರ್ಯ ಸಾಹಸಕಷ್ಟೇ ಅಲ್ಲ ಸಾಮರಸ್ಯಕ್ಕೂ ಕೂಡ ಹೆಸರುವಾಸಿಯಾದವರು ಇಂದಿನ ಪೀಳಿಗೆಯ ಇವರಿಗೆದ್ದಂತಹ ಹೌದಾರಿಯ ನೈಪುಣ್ಯತೆ ಮತ್ತು ಸ್ವಾಭಿಮಾನವನ್ನು ರೂಡಿಸಿಕೊಳ್ಳಬೇಕಿದೆ ಎಂದರು.
ಇನ್ನೂ ಸಿಪಿಐ ಜಿ.ಬಿ. ಉಮೇಶ್ ಮಾತನಾಡಿದರು ನಾಯಕ ಸಮುದಾಯ ಸ್ವಾಭಿಮಾನ ಸಂಕೇತ ಸತ್ಯ ಪ್ರಾಮಾಣಿಕತೆ ನಿಷ್ಠೆಯಿಂದ ಬದುಕಿದ ನಾಯಕ ಸಮುದಾಯ ಚಿತ್ರದುರ್ಗ ಪಾಳೆಗಾರರು ಯಾರಿಗೂ ಮೋಸ ಅನ್ಯಾಯ ಮಾಡಿಲ್ಲ ನುಡಿದಂತೆ ನಡೆದವರು ಶಬರಿ ರಾಮಾಯಣ ಬರೆದ ವಾಲ್ಮೀಕಿ ಮಹಾಭಾರತದ ಏಕಲುವ್ಯ ಗುರು ನಿಷ್ಠೆ ಸುರಪುರ ವೆಂಕಟಪ್ಪ ಸೇರಿದಂತೆ ಕೋಟೆ ಕಟ್ಟಿ ಆಳಿದ ಮತ್ತು ನಾಡನ್ನು ರಕ್ಷಣೆ ಮಾಡಿದ ಸಮಾಜ ನಮ್ಮ ನಾಯಕ ಸಮಾಜ ಆದರೆ ಇವತ್ತಿನ ದಿನಮಾನಗಳಲ್ಲಿ ಈ ಕ್ಷೇತ್ರದ ಜನತೆಯ ಮೂಲ ಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ನಮ್ಮ ಸಮುದಾಯದ ಏಳಿಗೆಗೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಹೆತ್ತ ತಂದೆ ತಾಯಿಯನ್ನು ಗೌರವಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದರು
ಇದೇ ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ನಿರ್ದೇಶಕರಾದ ಎಸ್ ಓಬಯ್ಯ, ಪಿ.ಓ. ತಿಪ್ಪೇಸ್ವಾಮಿ, ಹನುಮಣ್ಣ, ನೇರಲಗುಂಟೆ ಭೈಯಣ್ಣ, ಎಂ ಚಿನ್ನಯ್ಯ, ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ, ಪಾಪಣ್ಣ, ನಾಗರಾಜ್, ಆರ್ ಪಾಲಯ್ಯ ಏಜೆಂಟ್ರು, ಬಿ ಎಲ್ ಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಪಿ ಓಬಯ್ಯದಾಸ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಮಲ್ಲೂರಹಳ್ಳಿ ಗ್ರಾ. ಪಂ. ಸದಸ್ಯ ಮಾಜಿ ಉಪಾಧ್ಯಕ್ಷ ಕಾಟಯ್ಯ, ಕೆ.ಟಿ. ಮಲ್ಲಿಕಾರ್ಜುನ್, ನಲಗೇತನಹಟ್ಟಿ ನಲ್ಲನ ದೊಡ್ಡ ಬೋರೆಯ್ಯ , ಜಿ ವೈ ತಿಪ್ಪೇಸ್ವಾಮಿ ,ವೈ.ಒ ಚನ್ನಯ್ಯ, ಗಜ್ಜುಗಾನಹಳ್ಳಿ ಡಿ. ಬೋರಯ್ಯ,ಡಾ ಪಿ.ಕಾಟಂಲಿಂಗಯ್ಯ, ಮಾಜಿ ಸೈನಿಕ ಬೋಸೆ ರಂಗಪ್ಪ, ಪ್ರಕಾಶ್, ಗಂಡಯ್ಯ, ಕುದಾಪುರ ಕೃಷ್ಣ ಗೌಡ್ರು, ಡಾ,ಗೊಡ್ಲಯ್ಯ, ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್, ರಾಮಸಾಗರ ಸಿ.ಎಂ. ಪಾಲಯ್ಯ ,ಚೌಳಕೆರೆ ಶಿವರಾಜ್, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.