ನಾಯಕನಹಟ್ಟಿ :
ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿಗೆ ಯುವಕರು ಕುಡುತದ ಅಮಲಿಗೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ತಿಳಿಸಿದರು.
ಬುಧವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಜೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಧ್ಯಮುಕ್ತ ಸಮಾಜಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇಂತಹ ಒಂದು ಪುಣ್ಯಕಾರ್ಯ ನಡೆಸುತ್ತಿರುವುದರಿಂದ ಪ್ರತಿಯೊಬ್ಬರು ಕೈಜೋಡಿಸಿ ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಜಾಗೃತಿ ಯೋಜನಾಧಿಕಾರಿ ನಾಗರಾಜ್ ಮಾತನಾಡಿದರು. ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನು ಕಳೆದುಕೊಂಡಿರುವ ಅನೇಕ ಬಡ ಕುಟುಂಬಗಳಿಗೆ ಬದುಕಿನ ಬೆಳಕನ್ನು ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಡವರ ಪಾಲಿಗೆ ವರದಾನವಾಗಿದೆ ಎಂದರು
ಜಿಲ್ಲಾ ಜಾಗೃತಿ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ. ಕೆ.ಎಂ. ಶಿವಸ್ವಾಮಿ, ಸದಸ್ಯೆ ಸರ್ವಮಂಗಳ ಉಮಾಪತಿ, ಯೋಜನಾಧಿಕಾರಿ ಜಯಂತ್ ಕುಮಾರ್, ಪಟ್ಟಣ ಪಂಚಾಯತಿ ಸದಸ್ಯ ಪಿ. ಓಬಯ್ಯ ದಾಸ್,ಎಂ.ಟಿ. ಮಂಜುನಾಥ್,
ಮಾಜಿ ಸದಸ್ಯ ಟಿ. ಬಸಪ್ಪ ನಾಯಕ, ಕರ್ನಾಟಕ ಮದಕರಿ ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷೆ ಬಿ.ತಿಪ್ಪಕ್ಕ, ಲೋಕೇಶ್ ಚಾರಿ, ಪಾಲಾಕ್ಷಪ್ಪ, ಕಲಪ್ಪ, ಗಿರೀಶ್, ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಶ್ರೀಮತಿ ಆರ್. ಎನ್ .ಶಶಿಕಲಾ, ಪ್ರದೀಪ್ ಕುಮಾರ್, ಕೃಷಿ ಅಧಿಕಾರಿ ಚನ್ನವೀರಪ್ಪ, ಶಿವಕುಮಾರ್, ಜ್ಞಾನ ವಿಕಾಸ ಮೀನಾರಾಣಿ, ಸಮನ್ವಯಧಿಕಾರಿ. ಕಮಲ ಸೇರಿದಂತೆ ಸೇವಾ ಪ್ರತಿನಿಧಿಗಳು ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.