ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ದಶಕಗಳ ಕಾಲದ ರೈತರ ಸುದೀರ್ಘ ಹೋರಾಟ ಹಾಗೂ ಪ್ರಯತ್ನದ ಫಲವಾಗಿ ತಾಲೂಕಿನ ಸಾಣೇಹಳ್ಳಿ ಕೆರೆ ಸೇರಿದಂತೆ ಭಾಗದ ಕೆರೆಗಳಿಗೆ ನೀರು ಹರಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಗ್ರಾಮದ ಬಳಿ ಗೇಟ್ (ರೆಗ್ಯುಲೇಟರ್) ಓಪನ್ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಚಾಲನೆ ನೀಡಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಳೆದ ೩೦ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ನಿರಂತರ ಪ್ರಯತ್ನ ಹಾಗೂ ಹೋರಾಟಕ್ಕೆ ಇವತ್ತು ಸ್ವಲ್ಪ ಮಟ್ಟಿಗೆ ಫಲ ಸಿಕ್ಕಂತಾಗಿದೆ. ಈ ನೀರಾವರಿ ಯೋಜನೆಯು ಕೇವಲ ಹೊಸದುರ್ಗ ತಾಲೂಕಿಗೆ ಮಾತ್ರ ಸೀಮಿತವಾದದ್ದಲ್ಲ, ಶಾಸಕರು ಹೇಳಿದಂತೆ ಇದು ‘ಒಕ್ಕೂಟ ವ್ಯವಸ್ಥೆ’ಗೆ ಒಳಪಟ್ಟದ್ದು. ನಮ್ಮ ನಾಲ್ಕು ಜಿಲ್ಲೆಗಳಿಗೂ ಸೇರಿದ ನೀರಾಗಿದೆ. ‘ನನಗೆ ಬೇಕು, ನಿನಗೆ ಬೇಡ’ ಎಂದು ಹಠ ಮಾಡುವುದಕ್ಕಿಂತ, ಎಲ್ಲರೂ ಹಂಚಿಕೊAಡು ಊಟ ಮಾಡುವ ಉದಾರ ಸಂಸ್ಕೃತಿ ಶ್ರೇಷ್ಠವಾದದ್ದು.
ಪ್ರತಿಯೊಬ್ಬರಲ್ಲೂ ತಾಳ್ಮೆ ಇರಬೇಕು. ರೈತರು ಭೂಮಿ ಕಳೆದುಕೊಂಡಿದ್ದಾರೆ, ಅವರಿಗೆ ನೀರು ಸಿಗದಿದ್ದರೆ ವೇದನೆಯಾಗುತ್ತದೆ. ತಾಲೂಕಿನ ಎಲ್ಲಾ ಕೆರೆಗಳಿಗೂ ಕ್ರಮೇಣ ನೀರು ಬಿಡುವ ವ್ಯವಸ್ಥೆಯನ್ನು ಶಾಸಕರು ಮತ್ತು ಅಧಿಕಾರಿಗಳು ಮಾಡಬೇಕು. ರೈತನಿಗೆ ನೀರು, ಭೂಮಿ, ವಿದ್ಯುತ್ ಸರಿಯಾಗಿದ್ದರೆ ಸರ್ಕಾರಕ್ಕೆ ಸಾಲ ಕೊಡುವಷ್ಟು ಶಕ್ತನಾಗುತ್ತಾನೆ. ರೈತ ಬದುಕಿದರೆ ನಾವೆಲ್ಲರೂ ಬದುಕುತ್ತೇವೆ.
ಈ ಬೃಹತ್ ಯೋಜನೆಗೆ ಹಿಂದಿನಿAದಲೂ ಶ್ರಮಿಸಿದ ಮಹನೀಯರ, ದೈಹಿಕವಾಗಿ ದೂರವಾದವರ ಪರಿಶ್ರಮ ಅಪಾರ. ಪ್ರಸ್ತುತ ಈ ಯೋಜನೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಚಿವರಿಗೆ ಶಾಸಕ ಬಿ.ಜಿ.ಗೋವಿಂದಪ್ಪನವರಿಗೆ ಸಾರ್ವಜನಿಕರ ಪರವಾಗಿ ಧನ್ಯವಾದಗಳು ಎಂದರು
ಜಾಕ್ ವೆಲ್ ಗೇಟ್ ತೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಹೊಸದುರ್ಗ ಕ್ಷೇತ್ರ ಶಾಸಕ ಬಿ. ಜಿ. ಗೋವಿಂದಪ್ಪ “ಜನರ ಹಾಗೂ ರೈತರ ಕಷ್ಟಕ್ಕೆ ಸ್ಪಂದಿಸಿ, ನಮ್ಮೆಲ್ಲರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ೩ ಟಿಎಂಸಿ ನೀರು ಹರಿಸಲು ಅನುಮತಿ ನೀಡಿದ್ದಾರೆ. ಚಿತ್ರದುರ್ಗದ ಗೂಳಯ್ಯನಕೆರೆ ತಲುಪಿದ ತಕ್ಷಣವೇ ಹೊಸದುರ್ಗ ಭಾಗದ ನಾಲೆ ಹಾಗೂ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಎಂದರು.
ನೀರಾವರಿ ಇಲಾಖೆಯ ಅಧಿಕಾರಿ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನಲ್ಲಿ ಒಟ್ಟು ೩೨ ಕೆರೆಗಳನ್ನು ತುಂಬಿಸುವ ಯೋಜನೆಯಿದು. ಇವತ್ತು ಸಾಣೇಹಳ್ಳಿಯ ‘೧ ಅ’ ರೆಗ್ಯುಲೇಟರ್ ಎತ್ತುವುದರ ಮೂಲಕ ಪ್ರಥಮ ಹಂತದಲ್ಲಿ ೧೯ ಕೆರೆಗಳಿಗೆ ನೀರು ಹರಿಯಲು ಚಾಲನೆ ನೀಡಲಾಗಿದೆ ಎಂದರು
ಕಾರ್ಯಕ್ರಮದಲ್ಲಿ ಇಲಾಖೆಯ ಸೂಪರಿಂಟೆAಡಿAಗ್ ಎಂಜಿನಿಯರ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಇಇ), ಎ.ಇ.ಇ. ಸುರೇಶ್, ಪ್ರಕಾಶ್ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಸಾಣೇಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.