ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:: ತಾಲ್ಲೂಕಿನ ಜಾನಕಲ್ ಗ್ರಾಮದ ಸಮೀಪ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಕಾಲುವೆಗೆ ನೀರು ಕುಡಿಯಲು ತೆರಳಿದ್ದ ನಾಲ್ಕು ಎಮ್ಮೆಗಳು ಕಾಲು ಜಾರಿ ಬಿದ್ದ ಘಟನೆ ಬುಧವಾರ ಮಧ್ಯಾನ್ಹ ನಡೆದಿದೆ.
ಕಾಲುವೆಯ ಇಳಿಜಾರು ಪ್ರದೇಶಕ್ಕೆ ಬಿದ್ದ ಎಮ್ಮೆಗಳು ಮೇಲಕ್ಕೆ ಬರಲಾಗದೆ ಪರದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದರು. ಹಗ್ಗಗಳ ಸಹಾಯದಿಂದ ಎಮ್ಮೆಗಳ ರಕ್ಷಣಾ ಕಾರ್ಯ ನಡೆಸಿ, ನಾಲ್ಕು ಎಮ್ಮೆಗಳನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಜಾನಕಲ್ ಸಮೀಪದ ತಣಿಗೆಕಲ್ಲು ಗ್ರಾಮದ ರೈತ ಶಿವಣ್ಣ ಎಂಬುವರಿಗೆ ಸೇರಿದ್ದ ಎಮ್ಮೆಗಳು ಎಂದು ತಿಳಿದು ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಪಾಯದ ನಡುವೆಯೂ ಎಮ್ಮೆಗಳನ್ನು ರಕ್ಷಿಸಲು ಸ್ಥಳೀಯರು ಕೈಗೊಂಡ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳು ಹಾಗೂ ಸಾರ್ವಜನಿಕರು ಕಾಲುವೆಯ ಸಮೀಪ ತೆರಳುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.