October 9, 2026
IMG-20261009-WA0426

ನಾಯಕನಹಟ್ಟಿ: ಕುಗ್ರಾಮದ ಪ್ರತಿಭೆ ಇದೀಗ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೇದಿಕೆಯಲ್ಲಿ ಅನುರಣಿಸಲಿದೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಮೀಪದ ನಲಗೇತನಹಟ್ಟಿ ಗ್ರಾಮದ ಯುವ ಗಾಯಕ ಕೆ.ಟಿ. ಮುತ್ತುರಾಜ್ ಅವರು ಮೈಸೂರು ದಸರಾ ಮಹೋತ್ಸವದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಲು ಆಯ್ಕೆಯಾಗಿದ್ದಾರೆ.

ನಲಗೇತನಹಟ್ಟಿ ಗ್ರಾಮದ ಕಾಳೇ ತಿಪ್ಪಯ್ಯ ಮತ್ತು ರಾಮಕ್ಕ ದಂಪತಿಯ ಪುತ್ರರಾದ ಕೆ.ಟಿ. ಮುತ್ತುರಾಜ್ ಅವರು ಅಕ್ಟೋಬರ್ 14ರಂದು ಮೈಸೂರಿನಲ್ಲಿ ನಡೆಯಲಿರುವ ದಸರಾ ಮಹೋತ್ಸವದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗಾಯನದ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸಲಿದ್ದಾರೆ. ಮೈಸೂರಿನ ಅರಮನೆ ಮೈದಾನದ ಮುಂಭಾಗದ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ರಂಗಭೂಮಿ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಮುತ್ತುರಾಜ್ ಅವರು ತಮ್ಮ ಕಲಾ ಪ್ರತಿಭೆಯ ಮೂಲಕ ಈಗಾಗಲೇ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದ ಪ್ರತಿಭೆಯೊಂದು ನಾಡಿನ ಪ್ರಸಿದ್ಧ ಸಾಂಸ್ಕೃತಿಕ ವೇದಿಕೆಯಾದ ಮೈಸೂರು ದಸರಾ ಮಹೋತ್ಸವದಲ್ಲಿ ಗಾಯನ ಪ್ರಸ್ತುತಪಡಿಸುತ್ತಿರುವುದು ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ನಲಗೇತನಹಟ್ಟಿಯಂತಹ ಪುಟ್ಟ ಗ್ರಾಮದ ಪ್ರತಿಭೆ ಮೈಸೂರು ದಸರಾ ವೇದಿಕೆಯಲ್ಲಿ ತನ್ನ ಗಾನಸುಧೆ ಹರಿಸಲು ಸಜ್ಜಾಗಿರುವುದು ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading