May 9, 2026
IMG-20260509-WA0067.jpg

ನಾಯಕನಹಟ್ಟಿ -: ಗ್ರಾಮದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಗ್ರಾಮ ಉದ್ಧಾರ ಆಗಲು ಸಾಧ್ಯ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ಮುತ್ತಯ್ಯ ತಿಳಿಸಿದರು.

ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ಯುವ ನಾಟ್ಯ ಕಲಾಸಂಘ ವತಿಯಿಂದ ಏನ್ ಮುತ್ತಯ್ಯ ಇವರ ವಿವಾಹ ಮಹೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ *ಮೆಚ್ಚಿದ ಮಡದಿ ಅರ್ಥಾರ್ಥ ಹೆಂಡತಿಯ ಕೈಯಿಂದ ಗಂಡನ ಕೊಲೆ* ಎಂಬ ಸಾಮಾಜಿಕ ನಾಟಕ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು ನಾಟಕ ಕಲೆ ಕಲಾವಿದರನ್ನು ಬೆಳೆಸುವ ಜವಾಬ್ದಾರಿ ಸಮಾಜದ ಮೇಲಿದ್ದು ಕಲಾಭಿಮಾನಿಗಳು ಕಲಾವಿದರನ್ನು ಪ್ರೋತ್ಸಹಿಸಬೇಕು ಗ್ರಾಮೀಣ ಪ್ರದೇಶದ ಜನರಿಗೆ ಸಮಾಜದಲ್ಲಿನ ಅಂಕುಡೊಂಕುವುತಿದ್ದಳು ಇಂಥ ನಾಟಕಗಳು ಪ್ರೇರಣೆಯಾಗಲಿದೆ ಎಂದರು.

ಗ್ರಾಮದ ಮುಖಂಡ ನಲ್ಲನ ದೊಡ್ಡ ಬೋರಯ್ಯ ಮಾತನಾಡಿದರು ನಲಗೇತನಹಟ್ಟಿ ಗ್ರಾಮದಲ್ಲಿ ಭಜನೆ ಕೋಲಾಟ ನಾಟಕ ಪೌರಾಣಿಕ ಹೀಗೆ ಅನೇಕ ಕಲಾವಿದರಿದ್ದಾರೆ ಸರ್ಕಾರ ಅವರಿಗೆ ಸೂಕ್ತ ಮಾಸಾಸನವನ್ನ ನೀಡುವಲ್ಲಿ ಮುಂದಾಗಬೇಕು ಮತ್ತು ಗ್ರಾಮದ ಯುವ ಮುಖಂಡ ಎನ್ ಮುತ್ತಯ್ಯ ರವರ ವಿವಾಹದ ಪ್ರಯುಕ್ತ ಗ್ರಾಮದ ಕಲಾವಿದರು ಸಾಮಾಜಿಕ ನಾಟಕ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಗ್ರಾಮದ ಮುಖಂಡ ಪೂರ್ಣ ಓಬಯ್ಯ, ಬಿಜೆಪಿ ಮುಖಂಡ ಎಂವೈಟಿ ಸ್ವಾಮಿ, ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ದಿವಂಗತ ದೊಡ್ಡ ಬೋರಮ್ಮ ದಿವಂಗತ ನಲಗೇತಯ್ಯ, ಪಿ.ಬಿ. ಪೂರ್ಣ ಮುತ್ತಯ್ಯ, ಪುಷ್ಪಲತಾ ದಿ. ಜಿ ಬಿ ಮುತ್ತಯ್ಯ, ಬೋರಮ್ಮ ಎಸ್ ಜಿ ಸಣ್ಣ ಬೋರಯ್ಯ, ಬೋರಮ್ಮ ನಿಂಗರಾಜ್ ಬೋರಮ್ಮ ಮ್ಯಾಕೆ ಬೋರಯ್ಯ, ಗ್ರಾಮಸ್ಥರಾದ ಅಂಗಡಿ ತಿಪ್ಪೇರುದ್ರಪ್ಪ ,ಕಂಪಲಯ್ಯ, ಕೆ.ಕೆ. ಕ್ಯಾಸಯ್ಯ, ಸಂಗೀತ ನಿರ್ದೇಶಕ ಎಂ ಬಿ ದೊಡ್ಡಬೋರಯ್ಯ, ಎಸ್ ಟಿ ತಿಪ್ಪೇಸ್ವಾಮಿ, ಗಾಯಕ ಕೆ.ಟಿ. ಮುತ್ತುರಾಜ್, ಸೇರಿದಂತೆ ನಲಗೇತನಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading