May 8, 2026
FB_IMG_1778244783947.jpg

ಚಿತ್ರದುರ್ಗಮೇ08:
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಜಿಟಿಟಿಸಿಯ ಡಿಪ್ಲೊಮಾ ಕೋರ್ಸ್‍ಗಳ ಸದುಪಯೋಗ ಪಡೆದುಕೊಂಡಲ್ಲಿ ಶೇ. 100ರಷ್ಟು ಉದ್ಯೋಗದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ತಿಳಿಸಿದರು.

ನಗರದ ಹಳೆಯ ಬೆಂಗಳೂರು ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಗುರುವಾರ ಭೇಟಿ ನೀಡಿ ಪರೀಶೀಲನೆ ನಡೆಸಿದ ಅವರು, ಕಾಲೇಜಿನ ವಿವಿಧ ಪ್ರಾಯೋಗಿಕ ಲ್ಯಾಬ್‍ಗಳು ಮತ್ತು ಕಾರ್ಯಾಗಾರಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಇಲ್ಲಿನ ದೀರ್ಘಾವಧಿ ಮತ್ತು ಅಲ್ಪಾವಧಿ ಡಿಪ್ಲೊಮಾ ಕೋರ್ಸ್‍ಗಳು ಪ್ರಸ್ತುತ ತಾಂತ್ರಿಕ ಯುಗದಲ್ಲಿ ಅತ್ಯಂತ ಮಹತ್ವದ್ದಾಗಿವೆ. ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಸಂಸ್ಥೆ ಇರುವುದು ಹೆಮ್ಮೆಯ ವಿಷಯವಾಗಿದ್ದು, ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ತಾಂತ್ರಿಕ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವುದರಿಂದ ಶೀಘ್ರವಾಗಿ ಉದ್ಯೋಗ ಮಾರುಕಟ್ಟೆಗೆ ತೆರೆದುಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಹೋಬಲ ಟಿ.ವಿ.ಎಸ್. ಮಾಲೀಕ ಪಿ.ಎ.ಅರುಣ್‍ಕುಮಾರ್, ಕಾಲೇಜಿನ ಪ್ರಾಂಶುಪಾಲ ಸುಹಾಸ್ ಬಿ.ಎಸ್., ಆಡಳಿತಾಧಿಕಾರಿ ಕೆ. ಪಿ. ಕಾಟೇಗೌಡ ಹಾಗೂ ಉಪನ್ಯಾಸಕರಾದ ಪ್ರವೀಣ್ ಟಿ., ಚೇತನ್ ಟಿ., ಸುರೇಶ್ ನಾಯಕ್ ಎಂ. ಜೆ., ಸತೀಶ್ ಎಂ. ಎನ್., ಪ್ರದೀಪ್ ಜಿ. ಎಂ. ಮತ್ತು ವಿದ್ಯಾಶ್ರೀ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading