ಜಗಳೂರು: ತಾಲ್ಲೂಕಿನ ಗಡಿಮಾಕುಂಟೆ ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ತಮಟೆ ಉರುಮೆ ನಂದಿಕೋಲು ಕಲಾತಂಡಗಳೊಂದಿಗೆ ಶ್ರೀ ಬಸವೇಶ್ವರ ರಥೋತ್ಸವ ಜರುಗಿತು.
ಜಗಳೂರು ಸಮೀಪ ಇರುವ ಗಡಿಮಾಕುಂಟೆ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೇವಾ ಶ್ರೀ ಬಸವೇಶ್ವರ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ಹೂವಿನ ಹಾರಗಳಿಂದ ರಥವನ್ನು ಶೃಂಗಾರ ಮಾಡಲಾಯಿತು. 4.30 ಗಂಟೆಗೆ ಶ್ರೀ ಬಸವೇಶ್ವರ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು ಇನ್ನೂ ಶ್ರೀ ಬಸವೇಶ್ವರ ರಥೋತ್ಸವಕ್ಕೆ ದೈವಸ್ಥರ ಮನೆಯಿಂದ ಬಲಿ ಅನ್ನ ತರಲಾಯಿತು ಕಾಸು ಮೀಸಲು ಹಾಲು ಮೊಸರು ತಂದು ಶ್ರೀ ಬಸವೇಶ್ವರ ರಥದ ಗಾಲಿಗಳಿಗೆ ಎಡೆ ಹಾಕಲಾಯಿತು.
ನಂತರ ಮಹಾಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ಸಮ್ಮುಖದಲ್ಲಿ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ರಥಕ್ಕೆ ಚಾಲನೆ ನೀಡಿದರು.



ಇನ್ನೂ ರಥೋತ್ಸವ ಮುಂಚಿತವಾಗಿ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು. ಕಲ್ಲಹಳ್ಳಿ ಹುಬ್ಬಳ್ಳಿ ಶರಣಪ್ಪ 1ಲಕ್ಷ ರೂ. ಗಳಿಗೆ ಮುಕ್ತಿ ಬಾವುಟವನ್ನು ಪಡೆದುಕೊಂಡರು.
ಭಾನುವಾರ ಮಧ್ಯಾಹ್ನದಿಂದ ಬೆಲ್ಲದ ಬಂಡಿ, ಓಕಳಿ ಸೂರಬಾನದ ಆರತಿ ಬೆಳಗಿದ ನಂತರ ದೈವಸ್ಥರ ಸಮ್ಮುಖದಲ್ಲಿ ಗುಡಿ ತುಂಬಿಸಿದರು, ಭಾನುವಾರ ಸಂಜೆ ಶ್ರೀ ಬಸವೇಶ್ವರ ರಥೋತ್ಸವ ಪ್ರಯುಕ್ತ ಶ್ರೀ ರಾಮು ಮಲೋಡಿಯಸ್ ತುಮಕೂರು ಇವರಿಂದ ರಸಮಂಜರಿ ಕಾರ್ಯಕ್ರಮ.
ಇದೇ ಸಂದರ್ಭದಲ್ಲಿ ತಾಲ್ಲೂಕು ವೀರಶೈವ ಪಂಚಮಸಾಲಿ ಅಧ್ಯಕ್ಷ ಯು.ಜಿ ಶಿವಕುಮಾರ್, ತಾಲ್ಲೂಕು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್. ಸಿದ್ದೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಕೆ ತುಮಕೂರು ಬಸವರಾಜ, ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಎಲ್ಲಾ ಸಮುದಾಯದ ಮುಖಂಡರು ಇದ್ದರು.