September 8, 2026
FB_IMG_1788876803128


ಚಿತ್ರದುರ್ಗಸೆ.08:
ವಿದ್ಯಾರ್ಥಿಗಳು ಮತ್ತು ಯುವಜನತೆ ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಶಾಲಾ-ಕಾಲೇಜು ಹಂತದಲ್ಲೇ ಇದರ ವಿರುದ್ಧ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ ಹೇಳಿದರು.
ಚಳ್ಳಕೆರೆಯ ಚಿನ್ಮಯಿ ಪ್ಲಬಿಕ್ ಶಾಲೆಯಲ್ಲಿ ಈಚೆಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಚಳ್ಳಕೆರೆ ರೋಟರಿ ಕ್ಲಬ್ ಹಾಗೂ ಚಿನ್ಮಯಿ ಪಬ್ಲಿಕ್ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋಟ್ಪಾ-2003 ಕಾಯ್ದೆಯಡಿ ತಂಬಾಕು ನಿಷೇಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವ್ಯಸನ ಮುಕ್ತರಾಗಲು ಬಯಸುವವರಿಗೆ ತಂಬಾಕು ನಿಯಂತ್ರಣ ಕೋಶದಿಂದ ಉಚಿತ ಆಪ್ತ ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಎನ್.ಪಿ. ನಾಗರಾಜ, ಪ್ರಮುಖರಾದ ಡಾ. ಜಯಕುಮಾರ, ಜಯಪ್ರಕಾಶ್, ಡಾ. ಎಲ್.ಎಸ್. ವೀರೇಶ್, ಬಾಲಾಜಿ, ನಾಗೇಶ್, ಚಿನ್ಮಯಿ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿಗಳಾದ ವೆಂಕಟೇಶ್ ಮೂರ್ತಿ, ರಶ್ಮಿ, ಮುಖ್ಯೋಪಾಧ್ಯಾಯಿನಿ ಶಕುಂತಲಾ, ಆರ್‍ಕೆಎಸ್‍ಕೆ ಆಪ್ತಸಮಾಲೋಚಕ ನೇಮಿ ನಾಯ್ಕ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading