ಹೊಸದುರ್ಗ
ಕವಿತೆಗಳ ರಚನೆಯಲ್ಲಿ ವಸ್ತುಗಳ ಆಯ್ಕೆಯೂ ಬಹುಮುಖ್ಯವಾಗಿದ್ದು, ಸಮಾಜಮುಖಿಯಾದ ಕವಿತೆಗಳ ಮೂಲಕ ಸಮಾಜದಲ್ಲಿ ಬದಲಾವಣೆ ಹಾಗೂ ಪರಿವರ್ತನೆ ತರಲು ನಾವೆಲ್ಲರೂ ಸೇರಿ ಕಾರ್ಯನಿರ್ವಹಿಸಬೇಕಿದೆ ಎಂದು ವಕ್ತಾರರು ಅಭಿಪ್ರಾಯಪಟ್ಟರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ವನಕಲ್ಲು ಮಲ್ಲೇಶ್ವರ ಕ್ಷೇತ್ರದ ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಕವಿತೆಗಳಲ್ಲಿ ಅನುಭವದ ಸ್ಪರ್ಶ ಇರಬೇಕು. ಅಂತಹ ಅನುಭವಗಳು ಮೂಡಿಬರಲು ಕವಿಗಳು ಕವಿಗೋಷ್ಠಿಗಳಲ್ಲಿ ಭಾಗವಹಿಸಬೇಕು. ವಿವಿಧ ಶೈಲಿಯ ಕವಿತೆಗಳನ್ನು ಕೇಳಿ, ಅವುಗಳ ವಿಮರ್ಶೆ ಮಾಡಬೇಕು. ಕವಿತೆಗಳ ಸ್ವಾರಸ್ಯವನ್ನು ಅರಿಯುವ ಜೊತೆಗೆ ಹೆಸರಾಂತ ಸಾಹಿತಿಗಳು ಹಾಗೂ ಕವಿಗಳ ಕೃತಿಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಕ.ಸಾ.ಪ ಅಧ್ಯಕ್ಷ ಎಂ.ಆರ್. ಶಾತಪ್ಪ, ಮಾಜಿ ಅಧ್ಯಕ್ಷರಾದ ಕೆ.ಎಸ್. ಕಲ್ಮಠ್, ಹೆಗ್ಗರೆ ರಂಗಪ್ಪ, ಕಾಡುಗೊಲ್ಲ ಸಂಘದ ಅಧ್ಯಕ್ಷ ಟಿ. ರವೀಂದ್ರ, ಜಾನಪದ ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ನಿವೃತ್ತ ಡಿಡಿಪಿಐ ಸಿ. ರಾಮಪ್ಪ, ಜವಳಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ. ತಿಪ್ಪೇಶ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.