September 6, 2026
IMG-20260906-WA0265

ಹೊಸದುರ್ಗ. ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಕಾಂಪೌಂಡಿನ ಮೇಲೆ ಬಿತ್ತಿ ಪತ್ರದ ಗೋಡೆ ಬರಹವನ್ನು ಅನಾವರಣಗೊಳಿಸಿ, ನಶಾಮುಕ್ತ ಭಾರತ ಅಭಿಯಾನದ ಐದನೇ ವಾರದ ಅಂಗವಾಗಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿತ್ತಿ ಪತ್ರದ ಗೋಡೆ ಬರಹವನ್ನು ಅನಾವರಣ ಗೊಳಿಸಲಾಯಿತು. ಎಸ್ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಇಂತಹ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ.ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳ ಕುರಿತು ಮಾತನಾಡಿದರು ಯುವಜನರು ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಎಸ್ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ.ಎಸ್. ಕಲ್ಮಠ ರವರು- ನೂರುವಾರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ನಮ್ಮ ಭಾರತ ದೇಶವನ್ನು ನಶೆ ಮುಕ್ತ ಮಾಡಲು ನಮ್ಮ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯು ವಿವಿಧ ರೀತಿಯ ಯೋಚನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಇಂದು ಬಿತ್ತಿ ಪತ್ರವನ್ನು ಗೋಡೆಯ ಮೇಲೆ ಬರೆಯಿಸಿ ಅನಾವರಣ ಮಾಡಲಾಗಿ ಇನ್ನುಳಿದ ದಿನಗಳಲ್ಲಿ ಈ ಬಿತ್ತಿ ಪತ್ರದ ಗೋಡೆ ಬರಹವು ಸಾರ್ವಜನಿಕರಿಗೆ ಮಾರ್ಗದರ್ಶನವಾಗಬೇಕು ಜೊತೆಗೆ ಹಲವಾರು ರಾಜ್ಯಗಳಲ್ಲಿ ಚಂಡಿಗಡ ಮತ್ತು ಈಶಾನ್ಯ ರಾಜ್ಯಗಳಲ್ಲಿ ಯುವಕರು ಬಹಳಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ ಇದನ್ನು ಮನಗಂಡು ಹೊಸದುರ್ಗದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ಮುತುವರ್ಜಿಯಿಂದ ಯುವ ಜನತೆಗೆ ಮಾರ್ಗದರ್ಶನ ನೀಡಿ ನಶೆ ಮುಕ್ತ ವಿಕಸಿತ ಭಾರತಕ್ಕೆ ಕೈಜೋಡಿಸುತ್ತಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುವ ಮೂಲಕ ಅವರ ಶಕ್ತಿ ನಶಿಸುವಂತೆ ಮಾಡುವುದಲ್ಲದೆ ದೇಶದ ಪ್ರಗತಿಗೆ ಕಂಟಕ ತರುವಂತಹ ವಿದೇಶಿಯರ ಎಲ್ಲಾ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಸಸಕ್ತ ಭಾರತವನ್ನ ರೂಪಿಸುವುದಲ್ಲದೆ ನಿಮ್ಮ ಉಜ್ವಲ ಭವಿಷ್ಯಕ್ಕೆ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಶಿವಲಿಂಗಪ್ಪನವರು ವಹಿಸಿದ್ದರು ಹಾಗೂ ಅಕಾಡೆಮಿ ಡೈರೆಕ್ಟರ್ ಎಂಬಿ ತಿಪ್ಪೇಸ್ವಾಮಿಯವರು, ಧರ್ಮದರ್ಶಿಗಳಾದಂತಹ ಜಿ ಪ್ರಕಾಶ್ ಮೂರ್ತಿಯವರು, ಧರ್ಮದರ್ಶಿಗಳಾದ ಕಲ್ಲೇಶ್ ರವರು, ಶ್ರೀಮತಿ ವಿಜಯ ಶಿವಲಿಂಗಪ್ಪನವರು, ಪ್ರಾಂಶುಪಾಲರಾದ ದಯಾನಂದ್ ರವರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading