August 4, 2026
IMG-20260804-WA0285

ನಾಯಕನಹಟ್ಟಿ- ರೈತರು ರೇಷ್ಮೆಗೆ ಉತ್ತಮ ಗುಣಮಟ್ಟದ ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ಬೆಳೆಸಿದರೆ ರೇಷ್ಮೆ ವರ್ಷಕ್ಕೆ ಆರರಿಂದ ಏಳು ಬೆಳೆ ತೆಗೆದುಕೊಳ್ಳಬಹುದು ಎಂದು ತಾಂತ್ರಿಕ ಸೇವಾ ಕೇಂದ್ರ ಚಳ್ಳಕೆರೆ ರೇಷ್ಮೆ ವಿಸ್ತಾರಣಾಧಿಕಾರಿ ಜೆ. ಎಸ್. ಸ್ವಪ್ನ ಹೇಳಿದರು.

ಮಂಗಳವಾರ ನಾಯಕನಹಟ್ಟಿ ಪಟ್ಟಣದ ಮಹಾಂತೇಶ್ ಅವರ ತೋಟದಲ್ಲಿ. ರೇಷ್ಮೆ ಇಲಾಖೆ ಹಾಗೂ ತಾಂತ್ರಿಕ ಸೇವಾ ಕೇಂದ್ರ ಚಳ್ಳಕೆರೆ ಇವರ ವತಿಯಿಂದ. ಹಿಪ್ಪು ನೇರಳೆ ತೋಟ ಮತ್ತು ರೇಷ್ಮೆ ಹುಳುಗಳಿಗೆ ತಗಲುವ ಕೀಟಗಳು/ ರೋಗಗಳ ನಿಯಂತ್ರಣ ಕುರಿತು ರೇಷ್ಮೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೇಷ್ಮೆ ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ರೇಷ್ಮೆ ರೈತರಿಗೆ ಉತ್ತಮ ಕೃಷಿ ದಾಯಕ ಬೆಳೆಯಾಗಿದೆ ರೇಷ್ಮೆ ಗೂಡು ಬೇರೆ ಬೇರೆ ವಿಂಗಡಿಸಿ ಗೂಡನ್ನು ಸಂರಕ್ಷಣೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು ಆದ್ದರಿಂದ ಪ್ರತಿಯೊಬ್ಬ ರೈತರು ರೇಷ್ಮೆ ಬೆಳೆ ಬೆಳೆಯಲು ಸರ್ಕಾರದಿಂದ ನೀಡುವ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಚಳ್ಳಕೆರೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಡಿ. ಟಿ .ಬೋರಯ್ಯ, ರೇಷ್ಮೆ ಬೆಳೆಗಾರರಾದ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ.ಬಿ. ನಾಗರಾಜ್, ಬಾಬು ಸ್ವಾಮಿ, ವಿಜಯ್ ಕುಮಾರ್, ದಾನವೇಂದ್ರ, ಅನಿಲ್ ಕುಮಾರ್,ಬಿ. ಗೋವಿಂದರಾಜ್, ಡಿ ವಸಂತ, ಡಿ.ಟಿ. ನಾಗ್, ಚಿಕ್ಕಣ್ಣ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading