August 3, 2026
n721986919178577624136475e57dae073f510208c20eaace5ae751030484684fec79e4cbc04275785e420a

ಬೆಂಗಳೂರು, ಆ.3: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸದಾಗಿ 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸದಸ್ಯರ ಸಂಖ್ಯೆ ಸಂವಿಧಾನಾತ್ಮಕ ಗರಿಷ್ಠ ಮಿತಿ 33ಕ್ಕೆ ತಲುಪಿದೆ.
ಸಚಿವ ಸಂಪುಟ ರಚನೆಯಲ್ಲಿ ಪ್ರಾದೇಶಿಕ ಸಮತೋಲನದ ಜೊತೆಗೆ ಜಾತಿವಾರು ಪ್ರಾತಿನಿಧ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೊಸ ಸಂಪುಟದಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ 7, ಲಿಂಗಾಯಿತ ಸಮುದಾಯಕ್ಕೆ 7, ಒಕ್ಕಲಿಗ ಸಮುದಾಯಕ್ಕೆ 5, ಪರಿಶಿಷ್ಟ ಪಂಗಡಕ್ಕೆ 3, ಇತರೆ ಹಿಂದುಳಿದ ವರ್ಗಗಳಿಗೆ 7, ಅಲ್ಪಸಂಖ್ಯಾತರಿಗೆ 4 ಹಾಗೂ ರೆಡ್ಡಿ ಸಮುದಾಯಕ್ಕೆ ಒಂದು ಸಚಿವ ಸ್ಥಾನ ದೊರೆತಿದೆ.
ಲಿಂಗಾಯಿತ ಸಮುದಾಯದ ಸಚಿವರು: ಎಂ.ಬಿ. ಪಾಟೀಲ, ಈಶ್ವರ್ ಖಂಡ್ರೆ, ಬಸವರಾಜ್ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ, ಲಕ್ಷ್ಮಣ ಸವದಿ, ಡಾ. ಶರಣ ಪ್ರಕಾಶ್ ಪಾಟೀಲ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ.
ಒಕ್ಕಲಿಗ ಸಮುದಾಯದ ಸಚಿವರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಎನ್. ಚೆಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ ಹಾಗೂ ಕೆ.ಎಂ. ಶಿವಲಿಂಗೇಗೌಡ.
ಪರಿಶಿಷ್ಟ ಜಾತಿಗೆ ಸೇರಿದ ಸಚಿವರು: ಡಾ. ಜಿ. ಪರಮೇಶ್ವರ, ಪಿ.ಎಂ. ನರೇಂದ್ರಸ್ವಾಮಿ, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಕೆ.ಎಸ್. ಬಸವಂತಪ್ಪ, ರುದ್ರಪ್ಪ ಲಮಾಣಿ ಹಾಗೂ ಶಿವರಾಜ್ ಎಸ್. ತಂಗಡಗಿ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಸಚಿವರು: ಸತೀಶ್ ಜಾರಕಿಹೊಳಿ, ಟಿ. ರಘುಮೂರ್ತಿ ಹಾಗೂ ಬಿ. ನಾಗೇಂದ್ರ.
ಅಲ್ಪಸಂಖ್ಯಾತ ಸಮುದಾಯದ ಸಚಿವರು: ಯು.ಟಿ. ಖಾದರ್, ಬಿ.ಝಡ್. ಜಮೀರ್ ಅಹಮದ್ ಖಾನ್, ರಿಜ್ವಾನ್ ಅರ್ಷದ್ ಹಾಗೂ ಕೆ.ಜೆ. ಜಾರ್ಜ್.
ಇತರೆ ಹಿಂದುಳಿದ ವರ್ಗಗಳ ಸಚಿವರು: ಡಾ. ಯತೀಂದ್ರ ಸಿದ್ದರಾಮಯ್ಯ, ಬಿ. ಭೈರತಿ ಸುರೇಶ್, ಪುಟ್ಟರಂಗ ಶೆಟ್ಟಿ, ಎಸ್. ಮಧು ಬಂಗಾರಪ್ಪ, ಸಂತೋಷ ಲಾಡ್, ಡಾ. ಅಜಯ್ ಸಿಂಗ್ ಹಾಗೂ ರಾಮಲಿಂಗಾರೆಡ್ಡಿ.
ಬ್ರಾಹ್ಮಣ ಸಮುದಾಯಕ್ಕೆ ಅವಕಾಶವಿಲ್ಲ
ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಸಚಿವ ಸ್ಥಾನ ದೊರೆತಿಲ್ಲ. ಹಿಂದಿನ ಸಂಪುಟದಲ್ಲಿದ್ದ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಬ್ರಾಹ್ಮಣ ಸಮುದಾಯದ ಕೋಟಾದಡಿ ದಿನೇಶ್ ಗುಂಡೂರಾವ್ ಅಥವಾ ಆರ್.ವಿ. ದೇಶಪಾಂಡೆ ಅವರಿಗೆ ಅವಕಾಶ ಸಿಗಬಹುದು ಎಂಬ ರಾಜಕೀಯ ವಲಯದ ನಿರೀಕ್ಷೆ ಈಡೇರದ ಕಾರಣ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading