ತಳಕು-: ನೂರಾರು ಹಿಂದೂಗಳು ಶನಿವಾರ ತಳಕು ಗ್ರಾಮದ ತರಾಸು ಸರ್ಕಲ್ ನಿಂದ ಬೃಹತ್ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸಾಗಿ ಬಂದು ಶ್ರೀ ಆಂಜನೇಯ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು .







ಶೋಭಾತ್ರೆಯಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮತ್ತು ಹಿಂದೂ ಸಂಸ್ಕೃತಿಯ ಹಾಡಿಗೆ ನೂರಾರಿ ಯುವಕರು ಕುಣಿದು ಕುಪ್ಪಳಿಸುತ್ತಾ ವಾಲ್ಮೀಕಿ ಮೈದಾನಕ್ಕೆ ತೆರಳಿದ್ದರು
ಹಿಂದೂ ಸಂಗಮ ಆಯೋಜನ ಸಮಿತಿ ತ.ರಾ.ಸು. ವೆಂಕಣ್ಣಯ್ಯ ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷ ಅಜ್ಜಪ್ಪ
ಮಾತನಾಡಿದರು. ಭಾರತೀಯ ಸನಾತನ ಧರ್ಮದಲ್ಲಿ ಹಿಂದೂ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ ಭಾರತ ಮಾತೆಯ ಮಡಿಲಲ್ಲಿ ಹುಟ್ಟಿದ ನಾವು ಹಿಂದೂ ನಾವೆಲ್ಲ ಒಂದೇ ಎಂಬ ಘೋಷವಾಕ್ಯವನ್ನು ಹೇಳುವ ಮೂಲಕ ಹಿಂದೂ ಸಂಸ್ಕೃತಿಯ ಉಳಿವಿಗೆ ತಾವೆಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.ಆಶೀರ್ವಚನ ಶ್ರೀ ಶ್ರೀ ದೇನಾ ಭಗತ್ ಸ್ವಾಮೀಜಿ ರೇಖಲಗೆರೆ,ಮುಖ್ಯ ವಕ್ತಾರರು ಪ್ರಕಾಶ್ ಅರನಹಳ್ಳಿ ಶಿವಮೊಗ್ಗ ವಿಭಾಗ ಶರೀರಕ್ ಪ್ರಮುಖ.ಕಾರ್ಯಕ್ರಮದಲ್ಲಿ ಹಿಂದೂ ಬಂಧುಗಳಾದ ನಿವೃತ್ತ ಸೈನಿಕ ವಲಸೆ ವೀರಭದ್ರಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಹೂನ್ನೂರು ಗೋವಿಂದಪ್ಪ ,ನಿವೃತ್ತ ತಾಸಿಲ್ದಾರ್ ಎನ್. ರಘು ಮೂರ್ತಿ, ಈ. ರಾಮರೆಡ್ಡಿ, ಪಾಪೇಶ್ ನಾಯಕ, ರವಿಕುಮಾರ್, ಎಚ್. ವಿ. ಪ್ರಕಾಶ್, ಸೋಮು ಚಿತ್ರದುರ್ಗ, ಸಮಸ್ತ ತಳುಕು ಹೋಬಳಿಯ ಹಿಂದೂ ಬಂಧುಗಳು ಹಾಗೂ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.