ಚಳ್ಳಕೆರೆ ಡಿ.27
ಜಾನುವಾರುಗಳು ಮೇಯಲು ಮೀಸಲಿದ್ದ ಸರಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮ ಖಾತೆ ನೀಡಿರುವ ಆರೋಪಗಳು ಕೇಳಿ ಬಂದಿವೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಸುಮಾರು 60 ಕ್ಕೂ ಜನರಿಗೆ ಅಕ್ರಮಖಾತೆ ಮಾಡಿರುವ ಆರೋಪ ಕೇಳಿ ಬಂದಿದ್ದು ಅದರಲ್ಲೂ ಒಂದು 30+40 ಖಾಲಿ ನಿವೇಶನಕ್ಕೆ ಇಬ್ಬರಿಗೆ ಖಾತೆ ಮಾಡಿದ್ದು ಒಂದೇ ನಿವೇಶನಕ್ಕೆ ಖಾತೆ ಮಾಡಿ ಚೆಕ್ಕ್ ಬಂದಿ ಹಾಗೂ ಖಾತೆ ಸಂಖ್ಯೆ ಬೇರೆ ಬೇರೆ ನೀಡಿರುವುದು ಇಬ್ಬರು ಫಲಾನುಭವಿಗಳ ನಡುವೆ ನಿವೇಶನಕ್ಕಾಗಿ ಪೋಲಿಸ್ ಠಾಣೆ ಹಾಗೂ ತಾಲೂಕು ಪಂಚಾಯಿತಿ ಕಚೇರಿಗೆ ದಾಖಲೆ ಸಮೇತ ದೂರು ನೀಡಿರುವುದು ಬೆಳಕಿಗೆ ಬಂದಿದೆ.
ಸರಕಾರಿ ಗೋಮಾಳ ಹಾಗೂ ಅರಣ್ಯ ಇಲಾಖೆ ಹೆಸರಿನಲ್ಲಿರುವ ಭೂಮಿಯಲ್ಲಿ ಅಕ್ರಮ ಸಾಗುವಳಿ ಹಾಗೂ ಮನೆಗಳು ನಿರ್ಮಾಣ ಮಾಡಲು ಮುಂದಾಗಿದ್ದರೂ ಸಹ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.



ಗೋಪನಹಳ್ಳಿ ಹಾಗೂ ಚಿಕ್ಕೇನಹಳ್ಳಿ ಗ್ರಾಮಗಳ ವ್ಯಾಪ್ತಿಗೆ ಸೇರಿದ ಸರ್ಕಾರಿ ಆಸ್ತಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವಿಷಯ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಗೊತ್ತಿದ್ದರೂ ಸಹ ಸರಕಾರಿ ಆಸ್ತಿ ರಕ್ಷಣೆಗೆ ಮುಂದಾಗಿಲ್ಲ.
ಸರ್ಕಾರಿ ಗೋಮಾಳದಲ್ಲಿ ಹಕ್ಕು ಪತ್ರ ಪಡೆಯಲು ಸರ್ಕಾರ ಹಾಗೂ ಕಂದಾಯ ಇಲಾಖೆ ನಾನಾನಿಯಮ ರೂಪಿಸಿದ್ದಾರೆ. ಆದರೆ ಗೋಮಾಳದಭೂಮಿಯನ್ನು ಕಬಳಿಕೆ ಮಾಡಿದವರಿಗೇ ಗ್ರಾಪಂನಲ್ಲಿ ಅಕ್ರಮವಾಗಿ ಸರ್ಕಾರದ ಯಾವುದೇನಿಯಮಗಳನ್ನು ಪಾಲಿಸದೇ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಹಾಗೂ ನಿವೇಶನಗಳಿಗೆ ಗ್ರಾಪಂ ಖಾತೆ ಮಾಡಿಕೊಟ್ಟಿದೆ.
ಸರಕಾರಿ ಗೋಮಾಳದಲ್ಲಿ ಖಾಲಿನಿವೇಶನಗಳಿಗೆ ಹಾಗೂ ಮನೆಗಳಿಗೆ ಖಾತೆ ಮಾಡಲು ಗ್ರಾಪಂಗೆ ಅಧಿಕಾರ ಕೊಟ್ಟವರ್ಯಾರು ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.





About The Author
Discover more from JANADHWANI NEWS
Subscribe to get the latest posts sent to your email.