June 25, 2026
IMG-20260625-WA0247

ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಹೊಸದುರ್ಗ ವಿಧಾನ ಸಭಾ ಕ್ಷೇತ್ರದಿಂದ ಸ್ವರ್ಥಿಸಿ ನಾಲ್ಕು ಭಾರಿ ಶಾಸಕರಾಗಿ ಆಯ್ಕೆ ಯಾಗಿರುವ ಮತ್ತು ಪ್ರಸ್ತುತ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷರಾಗಿರುವ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಇದೇ ಜೂನ್ ೩೦ ರಂದು ಸಚಿವನಾಗಿ ಬರುವೆ ಎಂಬ ಇಂಗಿತವನ್ನ ಸಹಸ್ರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮುಂದೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬುಧವಾರ ಸಂಜೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ನಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ. ಪರಮೇಶ್ವರ ನಾಯಕ್ ಅವರಿಗೆ ನಮ್ಮ ಶಾಸಕರನ್ನ ಸಚಿವರನ್ನಾಗಿ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತೆ ಒಕ್ಕೋರಿಲಿನಿಂದ ಕೇಳಿದಾಗ ಆಗ ಪರಮೇಶ್ವರ ನಾಯಕ್ ಅವರು ಶಾಸಕ ಬಿ.ಜಿ.ಗೋವಿಂದಪ್ಪನವರು ಸಚಿವರಾಗುತ್ತಾರೆ ಸ್ವಲ್ಪ ದಿವಸ ಕಾಯಿರಿ ಎಂದಾಗ ಅದಕ್ಕೆ ದ್ವನಿ ಗೂಡಿಸಿ ಮಾತನಾಡಿದ ಗೋವಿಂದಪ್ಪ ಅವರು ಇದೇ ಜೂನ್ ೩೦ ರಂದು ಸಚಿವನಾಗಿ ಬರುವೆ ಎಂದರು. ಇದನ್ನು ಕೇಳಿದ ಕಾರ್ಯಕರ್ತರು ಹಾಗು ಅಭಿಮಾನಿಗಳು ಹರ್ಷಗೊಂಡರು.

ಮುAದುವರೆದು ಮಾತನಾಡಿದ ಬಿ. ಪರಮೇಶ್ವರ ನಾಯಕ್ ಪುಸ್ತಕ ರೂಪದಲ್ಲಿ ಸಿದ್ದಪಡಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ವಿವಿರಗಳನ್ನೋಳಗೊಂಡ ಎಂಟು ಪುಟಗಳ ವಿವರವುಳ್ಳ ಪುಸ್ತಕವನ್ನ ಕೈಲಿ ಹಿಡಿದು ಇಲ್ಲಿನ ಶಾಸಕ ಬಿ.ಜಿ.,ಗೋವಿಂದಪ್ಪನವರು ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಸಂಪೂರ್ಣವಾದ ವಿವರ ನೀಡಿ ಪುಸ್ತಕ ಮಾಡಿಸಿ ಹಂಚುತ್ತಿರುವುದು ರಾಜ್ಯದಲ್ಲೆ ಇದೇ ಮೋದಲು ಎಂಬ ಮೆಚ್ಚುಗೆಯನ್ನ ವ್ಯಕ್ತಪಡಿಸಿದ ಅವರು ಇದೇ ಮಾದರಿಯನ್ನ ಇಟ್ಟು ಕೊಂಡು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗು ಪಕ್ಷದ ವರಿಷ್ಟರ ಗಮನಕ್ಕೆ ತಂದು ರಾಜ್ಯಾದ್ಯಂತ ಇಂತಹ ಮತದಾರರಿಗೆ ಉಪಯುಕ್ತವುಳ್ಳ ಪುಸ್ತಕವನ್ನ ಮುದ್ರಿಸಿ ಬಿಡುಗಡೆ ಮಾಡುವ ಬಗ್ಗೆ ಗಮನಕ್ಕೆ ತರಲಾಗುವುದು ಎಂದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading