ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಾಲಿಗ್ರಾಮ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಗೊಬ್ಬರ ಮಾರಾಟ ಕೇಂದ್ರವನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಂಘದ ಅಧ್ಯಕ್ಷರಾದ ಸತೀಶ್ ಹೇಳಿದರು.

ಅವರು ಸಾಲಿಗ್ರಾಮ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024 – 25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕಾದರೆ ಸಂಘದ ಸದಸ್ಯರುಗಳ ಸಹಕಾರ ಅತ್ಯಗತ್ಯ ಎಂದರು.
ಸಂಘದಿಂದ 2024 – 25ನೇ ಸಾಲಿನಲ್ಲಿ ರೈತರುಗಳಿಗೆ ಒಟ್ಟು 4 ಕೋಟಿ 85 ಲಕ್ಷ ರೂ ಗಳನ್ನು
ಕೆ.ಸಿ.ಸಿ. ಸಾಲವನ್ನು ನೀಡಲಾಗಿದ್ದು ಪ್ರಸ್ತುತ ಸಾಲಿನಲ್ಲಿ ಸಂಘವು 87 ಸಾವಿರ ರೂ ಗಳ ನಿವ್ವಳ ಲಾಭಗಳಿಸಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರುಗಳು ಮಾತನಾಡಿ ಸರ್ವ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕು.
ಸಂಘದ ಮಳಿಗೆಗಳನ್ನು ನಿಯಮಾನುಸಾರವಾಗಿ ನಿರ್ವಹಿಸಬೇಕು, ಸಂಘದಿಂದ ಮಹಿಳಾ ಸಂಘಗಳಿಗೆ ನೀಡಿರುವ ಸಾಲವನ್ನು ವಸೂಲಾತಿ ಮಾಡಬೇಕು, ಸಂಘದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು, ಸಂಘಕ್ಕೆ ಆಹರ್ತೆಯುಳ್ಳ ಅಭ್ಯರ್ಥಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಬೇಕು ಹಾಗೂ ಸಂಘದಲ್ಲಿನ ಲೋಪದೋಷಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಿದರು.
ಸಭೆಯಲ್ಲಿ ಮೂಡ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಎನ್.ದಿನೇಶ್, ಸಂಘದ ಉಪಾಧ್ಯಕ್ಷ ಎಸ್.ಬಿ.ಮಂಜುನಾಥ, ನಿರ್ದೇಶಕರುಗಳಾದ ಎಸ್.ಬಿ.ಅಶೋಕ, ನಾಗೇಂದ್ರ, ಕರುಣ್ ಕುಮಾರ್, ಚಂದ್ರನಾಯಕ, ಎಸ್.ಜೆ.ಮಹೇಶ್, ಟ್ರಾಕ್ಟರ್ ಅನಂತ, ಜಯರಾಮೇಗೌಡ, ರುಕ್ಮಿಣಿ, ಅಶ್ವಿನಿ, ಸಣ್ಣದೇವಮ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಸ್.ಆರ್.ಪ್ರಕಾಶ್, ರಾಂಪುರ ಪುರುಷೋತ್ತಮ, ಮಾಜಿ ಉಪಾಧ್ಯಕ್ಷೆ ಸುಧಾರೇವಣ್ಣ, ಸದಸ್ಯರುಗಳಾದ ಲೋಕೇಶ್, ಹರೀಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಮುಖಂಡರುಗಳಾದ ಬೊಮ್ಮರಾಯಿಗೌಡ, ಸಾ.ರಾ.ಸತೀಶ್, ಮಹೇಂದ್ರ, ಅರುಣ್ ರಾಜ್, ದಡದಹಳ್ಳಿ ನಟರಾಜ್, ಜಯಂತ್, ವಸಂತ, ಗಿರೀಶ್, ಕೆಂಪಣ್ಣ, ರಾಜು, ವಿಶ್ವ, ಹೋಟೆಲ್ ರಾಮಣ್ಣ, ಕುಮಾರ್, ಜಯರಾಮು, ಸಂಘದ ಸಿಇಓ ಡಿ.ಟಿ.ಸುರೇಶ, ಸಿಬ್ಬಂದಿಗಳಾದ ಎನ್.ಎಸ್.ಮಧು, ಎಸ್.ಆರ್.ಶಶಿಕುಮಾರ್, ರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.