
ನಾಯಕನಹಟ್ಟಿ:: ಭೀಮನಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ರಾಮಲಿಂಗೇಶ್ವರ. ಮತ್ತು ಶ್ರೀ ದುರ್ಗಾಂಬಿಕ ದೇವಿ ಆಶೀರ್ವಾದದಿಂದ ಭೀಮನಕೆರೆ ಕೋಡಿ ಬಿದ್ದಿರುವುದು ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಕಂಟ್ರಾಕ್ಟರ್ ರಮೇಶ್ ಬಾಬು ಹೇಳಿದ್ದಾರೆ.
ಶನಿವಾರ ಹೋಬಳಿಯ ನೇರಲಗುಂಟೆ ಗ್ರಾ.ಪಂ. ವ್ಯಾಪ್ತಿಯ ಸ್ವ ಗ್ರಾಮ ಭೀಮನಕೆರೆ ಕೆರೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಗಂಗಾಮಾತೆಯ ಕಂಡು ನಮಸ್ಕರಿಸಿ ಮಾತನಾಡಿದರು. ಬರದ ಛಾಯೆ ಆವರಿಸಿದ ಭೀಮನಕೆರೆ ಕೋಡಿ ಬಿದ್ದಿರುವುದು ರೈತರಿಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
15 16ನೇ ಶತಮಾನದಲ್ಲಿ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರವರು ಹಟ್ಟಿ ಮಲ್ಲಪ್ಪ ನಾಯಕ ಆ ಸ್ಥಾನದಲ್ಲಿದ್ದ ಭೀಮ ಜಟ್ಟಿ ನೆನಪಿಗಾಗಿ ಭೀಮನಕೆರೆ ಕಟ್ಟಿಸಿದ್ದಾರೆ ಹನಿ ನೀರಿಗೂ ಪರದಾಡುವಂತೆ ಪರಿಸ್ಥಿತಿ ನಮ್ಮ ಗ್ರಾಮದಲ್ಲಿ ಇತ್ತು ಸುಮಾರು ಒಂದುವರೆ ಸಾವಿರ ಅಡಿ ಎಷ್ಟು ಬೋರ್ವೆಲ್ ಕೊರಸಿದರು ಕೂಡ ನೀರು ಬೀಳುತ್ತಿರಲಿಲ್ಲ ಈ ಒಂದು ಕೆರೆಗೆ ಕಾಟವ್ವನಹಳ್ಳಿ, ದಾಸರಗಿಡ್ಡಾಯ್ಯನಹಟ್ಟಿ, ಕಾರ್ತಿಕನಹಟ್ಟಿ, ಭೀಮನಕೆರೆ ಎಲ್ಲ ದೇವರಹಳ್ಳಿ ಸೇರಿದಂತೆ ತಡರಾತ್ರಿ ಸುರಿದ ಭಾರಿ ಮಳೆಗೆ ಈಭಾಗದ ರೈತರಿಗೆ ತುಂಬಾ ಅನುಕೂಲವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನೇರಲಗುಂಟೆ ಗ್ರಾಮ ಪಂಚಾಯಿತಿ ಸದಸ್ಯೆ ಮಾಜಿ ಅಧ್ಯಕ್ಷೆ ಶಾಂತಮ್ಮ ರಮೇಶ್ ಬಾಬು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಸಾಗರ ಮಲ್ಲಯ್ಯ, ರಾಮಚಂದ್ರಪ್ಪ ಎಚ್ ನಾಗರಾಜ್, ನಟರಾಜ್, ನಾಗಭೂಷಣ್, ಬಿ ಎಂ ಪಾಲಯ್ಯ, ಪಾಪಣ್ಣ, ಗುಂಚಿಗಾರ್ ಬೋರಯ್ಯ, ಸೇರಿದಂತೆ ಸಮಸ್ತ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಭೀಮನಕೆರೆ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.