
ಚಿತ್ರದುರ್ಗ ಅ.18 ಯುವಕನೊಬ್ಬ ನನ್ನ ಪ್ರೀತಿಸು ಎಂದು ಕಾಟ ಕೊಡುತ್ತಿದ್ದ. ಇದರಿಂದ ಮನನೊಂದ ಯುವತಿಯೊಬ್ಬಳು ಕಾಲೇಜಿನ ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಚಿತ್ರದುರ್ಗ ನಗರದ ಡಾನ್ ಬೋಸ್ಕೋ ಕಾಲೇಜಿನ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದು ಪ್ರೇಮಾ(18) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಚಳ್ಳಕೆರೆ ಮೂಲದ ಪ್ರೇಮಾ ಡಾನ್ ಬೋಸ್ಕೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಇಂದು ಕಟ್ಟಡದ ಮೇಲಿನಿಂದ ಬಿದ್ದು ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರೇಮಾಗೆ ಯುವನೊಬ್ಬ ನನ್ನ ಪ್ರೀತಿಸು ಎಂದು ವಿಪರೀತ ಕಾಟ ಕೊಡುತ್ತಿದ್ದನಂತೆ. ಸದ್ಯ ಈ ಬಗ್ಗೆ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
About The Author
Discover more from JANADHWANI NEWS
Subscribe to get the latest posts sent to your email.