ನಾಯಕನಹಟ್ಟಿ: ಕ್ರಿಕೆಟ್ ಕ್ರೀಡಾಪಟುಗಳು ಪಟ್ಟಣಕ್ಕೆ ಸೀಮಿತವಾಗದೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೊರ ಹೊಮ್ಮಬೇಕು ಎಂದು ಬಿಜೆಪಿ ಮುಖಂಡ ಅನಿಲ್ ಕುಮಾರ್ ಹೇಳಿದರು.
ಮಂಗಳವಾರ ಪಟ್ಟಣದ ಹೊರ ವಲಯದಲ್ಲಿ ನಾಯಕನಹಟ್ಟಿ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಪ್ರಥಮ ಕ್ರಿಕೆಟ್ ಕ್ರೀಡಾಕೂಟಕ್ಕೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಪ್ರತಿಭೆ ಅನ್ನೋದು ಕೇವಲ ಪಟ್ಟಣಕ್ಕೆ ಸೀಮಿತವಾಗಿದೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಯುವಕರು ಉತ್ತಮ ಆರೋಗ್ಯವಂತರಾಗಿರಲು ಕ್ರೀಡೆ ಅತಿ ಮುಖ್ಯ ಗುಟುಕ, ಮಧ್ಯ ಸೇವನೆ ಇಂತಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮವಾಗಿ ಕ್ರೀಡೆಯನ್ನು ಆಡುವುದರ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದರು.ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಮಾತನಾಡಿ ಕ್ರೀಡೆಗಳಲ್ಲಿ ಪೈಪೋಟಿ ಇರಬೇಕು, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಇಂದಿನ ಸೋಲೆ ಮುಂದಿನ ಗೆಲುವು ಸ್ಪರ್ಧಿಗಳಲ್ಲಿ ದ್ವೇಷ ಅಸೂಯೆಗಳಿಗೆ ಆಸ್ಪದ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಕ್ರೀಡಪಟುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಉತ್ತಮ ಕ್ರೀಡಪಟುಗಳಾಗಿ ಆಟವನ್ನು ಆಡಬೇಕು ಯುವಕರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕ್ರೀಡಾಪಟುಗಳಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಡಾನ್ ಬಾಸ್ಕೋ ಶಾಲೆಯ ಕಾರ್ಯದರ್ಶಿ ಎಸ್.ಟಿ. ಬೋರಸ್ವಾಮಿ, ಪತ್ರಕರ್ತ ನಾಗರಾಜ್, ಮೊಳಕಾಲ್ಮೂರು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಬಿ.ಕರಿಬಸಪ್ಪ ಚೌಳಕೆರೆ, ಚನ್ನಬಸಯ್ಯನಹಟ್ಟಿ ಡಿ.ಬಿ. ಬೋಸಯ್ಯ, ಶರಣಪ್ಪ, ಕ್ರೀಡಾಪಟುಗಳು ಕ್ರೀಡಾ ಅಭಿಮಾನಿಗಳು ಇದ್ದರು.About The Author
Discover more from JANADHWANI NEWS
Subscribe to get the latest posts sent to your email.