ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ ): ತಾಲೂಕಿನ ಮೇಲೂರು ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಶಂಭುಲಿಂಗೇಶ್ವರ ದೇವಾಲಯ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ ದೇವರ ವಿಗ್ರಹವನ್ನು ಜಲ ನಿವಾಸಕ್ಕೆ ಇಡುವ ಕಾರ್ಯವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.




ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ಕೆತ್ತಿರುವ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ವಿವಿಧ ಹೋಮ ಹವನಗಳು, ದೇವಸ್ಥಾನದಲ್ಲಿ ಸ್ಥಳಶುದ್ಧಿ, ಗಣಪತಿ ಪೂಜೆ, ಗಣ ಹೋಮ, ದುರ್ಗಾಹೋಮ ಮತ್ತು ವಿವಿಧ ಪೂಜಾ ಕಾರ್ಯಗಳನ್ನು ಮಾಡಿ ನದಿ ಕುಂಭ ಸ್ಥಾಪನಾ ಕಾರ್ಯವನ್ನು ಪ್ರಧಾನ ಅರ್ಚಕ ಬಸವರಾಜಪ್ಪ ಮತ್ತು ಅರ್ಚಕ ಪ್ರಕಾಶ್ ಅವರ ನೇತೃತ್ವದಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವತಾ ಕಾರ್ಯದ ಪ್ರಯುಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣಾ ಕಾರ್ಯವನ್ನು ಮಾಡಲಾಯಿತು.
ಮೈಮುಲ್ ನಿರ್ದೇಶಕ
ಎ.ಟಿ.ಸೋಮಶೇಖರ್ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿ ಮೇಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯಕ್ಕೆ ಸದ್ಭಕ್ತರು, ಸುತ್ತ ಮುತ್ತಲ ಗ್ರಾಮಸ್ಥರುಗಳು ಹಾಗೂ ಭಕ್ತಾದಿಗಳು ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಸಹಕಾರವನ್ನು ನೀಡಬೇಕೆಂದರು.
ದೇವತಾ ಕಾರ್ಯದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು, ಮಕ್ಕಳು, ಮೇಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.