March 7, 2026
IMG-20260307-WA0209.jpg

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಆರಾಧ್ಯ ದೈವ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಪ್ರಯುಕ್ತ ಶ್ರೀ ರಾಜ ಲಿಂಗ ಸ್ವಾಮಿ ಎಸ್ಸಿ/ ಎಸ್ಟಿ/ ವಿದ್ಯಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಜಗಳೂರು ಇವರ ಸಹಯೋಗದಲ್ಲಿ ಎಸ್. ಕೆ .ಒ. ಎಸ್. ಟಿ. ಮೆಮೋರಿಯಲ್ ಸ್ಕೂಲ್ ಹಿರೇಮಲ್ಲನಹೊಳೆ ಸೊಕ್ಕೆ ಮತ್ತು ಮಲ್ಲೂರಹಳ್ಳಿ ಶಾಲೆಗಳ ವತಿಯಿಂದ. ಹಾಗೂ ಕಲರ್ ವಂಶಸ್ಥರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಜಾತ್ರಾ ಮಹೋತ್ಸವ ಪ್ರಯುಕ್ತ ದಿನಾಂಕ 6/ 3 /2026 ರಂದು ಶುಕ್ರವಾರ ಮಜ್ಜಿಗೆ ಸೇವೆಯನ್ನು ಎಸ್ ಕೆ.ಒ ಎಸ್ ಟಿ ಮೆಮೊರಿಯಲ್ ಸ್ಕೂಲ್ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ, ಸೌಭಾಗ್ಯಮ್ಮ ರವರು ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಮಜ್ಜಿಗೆ ಸೇವೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಕೌಲರ್ ದುಶಾಂತ್,ಹಾಗೂ ಹಿರೇಮಲ್ಲನಹೊಳೆ ಎಸ್. ಕೆ.ಒ.ಎಸ್‌. ಟಿ. ಶಾಲೆಯ ಮುಖ್ಯ ಶಿಕ್ಷಕಿ ಎನ್. ರೇಖಾ, ಸೊಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಮಲ್ಲೂರಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಜೋತಿ ಸೇರಿದಂತೆ ಮೂರು ಶಾಲೆಯ ಸಿಬ್ಬಂದಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading