April 30, 2026
IMG-20260306-WA0167.jpg

ರಾಜ್ಯ ಸರ್ಕಾರ ಮಂಡಿಸಿದ ಈ ಸಾಲಿನ ಬಜೆಟ್ ಅಭಿವೃದ್ಧಿ ಪರ ಹಾಗೂ ಪ್ರಗತಿ ಪರವಾದ ಬಜೆಟ್ ಆಗಿದೆ ಎಂದು ಆರ್ಥಿಕ ಚಿಂತಕ ಎಸ್. ಲಕ್ಷ್ಮಣ ಅಭಿಪ್ರಾಯಪಟ್ಟಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳ ಮುಂದುವರಿಕೆಗೆ ಅಗತ್ಯ ಅನುದಾನ ನೀಡಿರುವುದು, ಜನರ ಮೂಲಸೌಕರ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಶ್ಲಾಘನೀಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ರೂ.11,343 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ರಾಜ್ಯದ ನೀರಾವರಿ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಚಿತ್ರದುರ್ಗ ಜಿಲ್ಲೆಗೆ ಕೃಷಿ ತರಬೇತಿ ಮತ್ತು ಉದ್ಯಮ ಕೇಂದ್ರವನ್ನು ಉನ್ನತೀಕರಣ ಮಾಡುವುದು ಹಾಗೂ ಹೊಸ ತಾರಾಲಯ ಸ್ಥಾಪನೆ ಮಾಡುವ ನಿರ್ಧಾರವು ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ಈ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಜನಪರ ಹಾಗೂ ಅಭಿವೃದ್ಧಿ ಪರ ಬಜೆಟ್ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಂದನೆಗಳೊಂದಿಗೆ
ಎಸ್. ಲಕ್ಷ್ಮಣ
ಆರ್ಥಿಕ ಚಿಂತಕರು / ಆರ್ಥಿಕ ವಿಶ್ಲೇಷಕರು
ಮೊ.: 9448565687

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading