February 7, 2026
FB_IMG_1770478761681.jpg

ಹಿರಿಯೂರು:
ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಹಿರಿಯೂರು ತಾಲ್ಲೂಕಿನ ಯಾವುದೇ ಕೆರೆಗಳಿಗೆ ಪೈಪ್ ಲೈನ್ ಕಾಮಗಾರಿ ಆಗಿಲ್ಲ. ಈಗಾಗಲೇ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಕೆರೆಗಳಿಗೆ ಲಿಂಕ್ ಕೊಡುವ ಪೈಪ್ ಲೈನ್ ಬಹುತೇಕ ಕಾಮಗಾರಿ ಮುಗಿದಿದೆ, ನಮ್ಮ ತಾಲ್ಲೂಕಿನಲ್ಲಿ ಮಾತ್ರ ಹಾಗೆಯೇ ಉಳಿದಿದೆ ಎಂಬುದಾಗಿ ಕೆ.ಟಿ.ತಿಪ್ಪೇಸ್ವಾಮಿ ಅವರು ಆರೋಪಿಸಿದರು.
ತಾಲ್ಲೂಕಿನ ಐಮಂಗಳ ಗ್ರಾಮದ ಕಲ್ಕುಂಟಮ್ಮ ದೇವಸ್ಥಾನದ ಆವರಣದಲ್ಲಿ ಐಮಂಗಳ ಹೋಬಳಿಯ ನೀರಾವರಿ ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆದ್ದರಿಂದ ಹಿರಿಯೂರು ತಾಲ್ಲೂಕಿನ ಯಾವುದೇ ಕೆರೆಗಳಿಗೂ ಪ್ರಾಯೋಕವಾಗಿಯೂ ಸಹ ನೀರು ಹರಿಸಲು ಬರುವುದಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಹಣ ಮಂಜೂರಾಗಿ ಮಾಡಿದರೆ ಮಾತ್ರ ನಮ್ಮ ತಾಲ್ಲೂಕಿನ ಕೆರೆಗಳಿಗೆ ಕಾಮಗಾರಿ ಮುಗಿಸಿ ನೀರು ಹರಿಸಬಹುದು ಹಣ ಬಿಡುಗಡೆ ಆಗದೇ ಇದ್ದರೆ, ಇನ್ನು ನಾಲ್ಕು-ಐದು ವರ್ಷ ನೀರು ಬರುವುದು ಅನುಮಾನವಾಗಿದೆ.
ಆದ್ದರಿಂದ ಐಮಂಗಳ ಹೋಬಳಿಯ ಪ್ರತಿ ಗ್ರಾಮದಿಂದಲೂ ಮಹಿಳೆಯರು ಯುವಕರು ರೈತರು ಬಹುದೊಡ್ಡ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಹಿರಿಯೂರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿ ಕಾರ್ಯದರ್ಶಿ ಬಬ್ಬೂರ್ ಯಶವಂತ್ ಅವರು ಮಾತನಾಡಿ, ಐಮಂಗಳ ಹೋಬಳಿಯಿಂದ ಬಹಳ ದೊಡ್ಡಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ ಮತ್ತು ಐಮಂಗಳ ಹೋಬಳಿಯ ಗಡಿಯಿಂದ ಚಿತ್ರದುರ್ಗ ಗಡಿಯವರಿಗೆ ಎಲ್ಲಾ ಊಟ ತಿಂಡಿ ವಸತಿ ವ್ಯವಸ್ಥೆ ಮಾಡಿಕೊಡುತ್ತೇವೆ ಮತ್ತು ಹಿರಿಯೂರು ಬಂದ್ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಭಾಗವಹಿಸುತ್ತಿವೆ ಎಂಬುದಾಗಿ ಭರವಸೆ ನೀಡಿದರು.
ಈ ನೀರಾವರಿ ಹೋರಾಟ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾದ ತಿಪ್ಪೀರಯ್ಯ, ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ್, ಗುರುಸಿದ್ದಪ್ಪ, ರಮೇಶ್, ಮಂಡ್ಲಾರೆಟ್ಟಿ, ಚಂದ್ರಶೇಖರ್, ಹುಲಿತೊಟ್ಲು ಆನಂದಪ್ಪ, ಅರವಿಂದ, ತಾಳವಟ್ಟಿ ಶಾಂತರಾಜ್ ,ರವೀಂದ್ರ, ಸೂರಗೊಂಡನಹಳ್ಳಿಶಿವಣ್ಣ, ಗೌನಳ್ಳಿ ಹನುಮಂತರೆಡ್ಡಿ, ಬಸಪ್ಪ ಸೇರಿದಂತೆ ಅನೇಕ ರೈತಮುಖಂಡರು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading