February 7, 2026
IMG-20260207-WA0151.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ(ಮೈಸೂರು ಜಿಲ್ಲೆ): ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮತದಾರರ ಋಣವನ್ನು ತೀರಿಸಲಾಗುವುದು ಎಂದು ಮೈಸೂರು ಜಿಲ್ಲಾ ಹಾಪ್ ಕಾಮ್ಸ್ ನ ನೂತನ ನಿರ್ದೇಶಕ ಮಿರ್ಲೆ ಸಂಜಯ್ ಹೇಳಿದರು.

ಅವರು ಸಾಲಿಗ್ರಾಮ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಗ್ರಾಮಸ್ಥರುಗಳಿಂದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಮೈಸೂರು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಾನು ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದೇನು. ಆದರೂ ಕ್ಷೇತ್ರದ ಎಲ್ಲಾ ಮತದಾರರು ನಮ್ಮ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ನಾನು ನಿರ್ದೇಶಕನಾಗಿ ಆಯ್ಕೆಯಾಗಲು ಕಾರಣರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮ ಆಡಳಿತದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುವ ಮೂಲಕ ಕ್ಷೇತ್ರದ ಮತದಾರರ ಋಣವನ್ನು ತೀರಿಸಲಾಗುವುದು. ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂಘದ ಕಾರ್ಯಕ್ರಮಗಳನ್ನು ರೂಪಿಸಿ ಅದರ ಮೂಲಕ ಸದಸ್ಯರುಗಳಿಗೆ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತಹ ಕೆಲಸವನ್ನು ಮಾಡಲಾಗುವುದು ಎಂದ ಸಂಜಯ್ ಅವರು ನನ್ನ ಗೆಲುವಿಗೆ ಸಹಕರಿಸಿದ ಕ್ಷೇತ್ರದ ಸರ್ವ ಮತದಾರರು, ಮುಖಂಡರುಗಳು, ಸ್ನೇಹಿತರುಗಳು, ಸೇರಿದಂತೆ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಜೆಸಿಬಿ ಬಲರಾಮ್, ಸುಧಾಕರ್, ಕೆ.ಸಿ.ಸುಬ್ಬೆಗೌಡ, ನಾಗರಾಜು, ರಾಜೇಗೌಡ, ರಾಜು, ಕಾಳೇಗೌಡ, ಗೌ.ಹರೀಶ್, ರಂಗೇಗೌಡ, ಮಂಜುನಾಥ್, ಯೋಗೇಶ್, ನಾಗೇಂದ್ರ, ಸುಂದರ, ಅರುಣ್, ಹರೀಶ್, ಚಂದ್ರ, ಮಹೇಶ್,
ತಾ.ಪಂ. ಮಾಜಿ ಅಧ್ಯಕ್ಷ ಟಿ.ಎಸ್.ರವಿ, ನಾಟನಹಳ್ಳಿ ಸಂತೋಷ್, ಮಿರ್ಲೆ ಗ್ರಾಮದ ಬಾಲು, ಮೋಹನ, ಸತೀಶ್, ರತನ್, ಗಣೇಶ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading