ಹೊಸದುರ್ಗ:ನಮ್ಮ ಬದುಕು ಸಾರ್ಥಕವಾಗಬೇಕಾದರೆ ನಿವೃತ್ತಿಯ ನಂತರ ಸಮಾಜ ಸೇವೆ ಮಾಡುವ ಮೂಲಕ ಸೇವಾ ವೃತ್ತಿಯಲ್ಲಿ ಪ್ರವೃತ್ತರಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಆರ್.ಶಾAತಪ್ಪ ಕಿವಿ ಮಾತು ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ನಿವೃತ್ತ ನೌಕರರಿಗೆ ಸನ್ಮಾನ ಮತ್ತು “೧೨ ನೇ ಶತಮಾನದ ಶಿವಶರಣರ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿ ದೇವರ ಪಾತ್ರ” ಎಂಬ ವಿಷಯವನ್ನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ನೌಕರಿಯಲ್ಲಿ ಇದ್ದವರು ನಿವೃತ್ತಿಯಾದ ನಂತರ ಅರಾಮಾಗಿ ಮನೆಯಲ್ಲಿ ಮಕ್ಕಳು ಮಮ್ಮೋಕ್ಕಳೊಂದಿಗೆ ಕಾಲ ಕಳೆಯುತ್ತಾರೆ, ಇನ್ನು ಕೆಲವರು ನಿವೃತ್ತಿಯ ಎಲ್ಲರೊಂದಿಗೆ ಕಾಲ ಕಳೆಯುವುದರ ಜೋತೆಗೆ ಸಮಾಜ ಸೇವೆಯ ಕಾರ್ಯಗಳಲ್ಲಿ ತೋಡಗಿಸಿಕೊಳ್ಳುತ್ತಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೇನಾ ಪಡೆಯ ಸಂಸ್ಧಾಪಕ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ನಾಗತಿಹಳ್ಳಿಮಂಜುನಾಥ್ ನಿವೃತ್ತಿ ಹೊಂದಿರುವ ತಿಪೇಸ್ವಾಮಿಯವರು ತಮ್ಮ ಕೆಲಸದ ಅವಧಿಯಲ್ಲಿ ಸರಿಯಾಗಿ ಕರ್ತವ್ಯವನ್ನ ನಿಭಾಯಿಸಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಿವೃತ್ತಿಯ ನಂತರ ಅವರು ಸಮಾಜಕ್ಕೆ ಒಳಿತಾಗುವ ಕೆಲಸವನ್ನ ಮಾಡಿ ಸಮಾಜ ಸೇವೆ ಮಾಡುವ ಮೂಲಕ ಅವರ ಬದುಕು ಸಾರ್ಥವಾಗಲಿ ಎಂದು ಶುಭ ಹಾರೈಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಎಂ.ಹೆಚ್. ತಿಪ್ಪೇಸ್ವಾಮಿ ಹೊ¸”
[10/4, 2:20 PM] Nagathihallimanjunath: ದರು.
ಗೌರವ ಸ್ವೀಕರಿಸಿ ಮಾತನಾಡಿದ ಎಂ.ಹೆಚ್. ತಿಪ್ಪೇಸ್ವಾಮಿ ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ಆನಿವಾಳ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೋಂದಿದ್ದೇನೆ, ಸೇವೆ ಮಾಡಿರುವುದು ನನಗೆ ತುಂಭಾ ಸಂತೋಷವನ್ನ ತಂದು ಕೊಟ್ಟಿದೆ ಎಂದು ಅಭಿಪ್ರಾಯಿಸಿದರು.
ಸೇನಾ ಪಡೆಯ ಅಧ್ಯಕ್ಷ ಮೀರಸಾಬಿಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪಿ ಯು ಕಾಲೇಜಿನ ಕನ್ನಡ ಉಪನ್ಯಾಸಕ ಚಂದ್ರಯ್ಯ “೧೨ ನೇ ಶತಮಾನದ ಶಿವಶರಣರ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿ ದೇವರ ಪಾತ್ರ” ಎಂಬ ವಿಷಯವನ್ನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸೇನಾ ಪಡೆಯ ಗೌರವಾಧ್ಯಕ್ಷ ಎನ್.ಕೆ.ತಿಪ್ಪೇಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಬೆನಕನಹಳ್ಳಿ ಶಿವರುದ್ರಪ್ಪ, ಉಪಾಧ್ಯಕ್ಷರುಗಳಾದ ಬಾಗೂರು ಹನುಮಂತಪ್ಪ, ಕೊಂಡಜ್ಜಿ ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಸ್ಟುಡಿಯೋಬಸವರಾಜ್, ಸಹ ಕಾರ್ಯದರ್ಶಿ ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಕೆ.ಕೆ.ಹಳ್ಳಿ ಸಾಗರ್ (ಲವಕುಮಾರ್) ಖಜಾಂಚಿ ಪ್ರತಾಪ್‌ದುರ್ಗ, ಸಂಚಾಲಕ ಪುನಿತ್‌ಕುಮಾರ್,ಸಲಹಾ ಸಮಿತಿಯ ಸದಸ್ಯ ಕೆಂಕೆರೆ ಅಂಜನ್‌ಕುಮಾರ್, ಕ.ಸಾ.ಪ ಕಾರ್ಯದರ್ಶಿ ಚಂದ್ರುಕಲಾವಿದ, ಎಂ.ಎಸ್.ರಮೇಶ್‌ಮತ್ತೋಡು, ಮಾದಿಗ ನೌಕರರ ಸಂಘದ ಅಧ್ಯಕ್ಷ ಮೂರ್ತಪ್ಪ ಸೇರಿದಂತೆ ಸಮಾಜದ ಮುಖಂಡರು, ಸಮಾಜ ಬಾಂಧವರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.