ವರದಿ: ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಜನರು ಪ್ರತ್ಯಕ್ಷವಾಗಿ ಕಾಣುವ ಹಾಗೂ ನೈಜ ಹಾಸ್ಯವನ್ನ ಮರೆತು ಮೋಬೈಲ್‌ನಲ್ಲಿ ಬರುವ ಹಾಸ್ಯಕ್ಕೆ ತಲ್ಲೀನರಾಗಿಬಿಟ್ಟಿದ್ದಾರೆ, ಪ್ರತಿಯೊಂದು ಸನ್ನವೇಷದಲ್ಲಿ ಪ್ರತಿಯೊಂದು ಘಟನೆಯಲ್ಲೂ ಸಹಾ ಹಾಸ್ಯ ಎಲ್ಲಾ ಕಡೆ ಸಿಗುತ್ತದೆ ಆದರೆ ಹಾಸ್ಯವನ್ನು ನೋಡುವ ಮತ್ತು ಕೇಳುವ ಮನಸ್ಸಿರಬೇಕು ಎಂದು ಸಾಹಿತಿ ಡಾ:ಪರಮೇಶ್ವರಪ್ಪ ಕುದರಿ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಅನಿಕೇತನ ವಿಚಾರ ವೇದಿಕೆ ಹೊಸದುರ್ಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹೊಸದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಗೆ ಹಬ್ಬ ಮತ್ತು ಶಾಯಿರಿ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನಷ್ಯನ ಮನಸ್ಸು ಸದಾ ಲವ ಲವಿಕೆಯಿಂದ ಕೂಡಿರಬೇಕು, ಸದಾ ಹಸನ್ಮುಖಿಯಾಗಿರಬೇಕು ನಗುವಿನ ಗುಣವನ್ನ ಹೊಂದಿರಬೇಕು, ಜೋತೆಗೆ ಹಾಸ್ಯ ಪ್ರಜ್ಞೆ ಇರಬೇಕು, ನಗುವ ಕ್ಷಣಗಳನ್ನು ಆನಂದಿಸಬೇಕು, ಈಗಿದ್ದಾಗ ಮಾತ್ರ ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತವೆ ಎಂದ ಅವರು ತಾವೇ ರಚಿಸಿದ ಕೆಲವು ಶಾಯಿರಿಗಳನ್ನು ಹೇಳಿ ಸಾಹಿತ್ಯಾಸಕ್ತರನ್ನ ನಗೆ ಗಡಲಲ್ಲಿ ತೇಲಿಸಿ ಹಾಸ್ಯಕ್ಕೆ ಪಂಚ್ ಮುಖ್ಯ ಎಂದರು. ೧೯೮೫ ರಲ್ಲಿ ಇಟ್ಟಿಗೆ ಈರಣ್ಣನವರು ಶಾಯಿರಿ ರಚನೆಯ ಬಗ್ಗೆ ಪುಸ್ತಕವನ್ನ ಬರೆದಿದ್ದರು ಶಾಯಿರಿ ರಚನೆ ಮಾಡುವವರು ಕರ್ನಾಟದಲ್ಲಿ ೧೬ ರಿಂದ ೧೮ ಮಂದಿ ಮಾತ್ರ ಇದ್ದಾರೆ ಅವರಲ್ಲಿ ನಾನೂ ಕೂಡ ಒಬ್ಬ ಎಂದರು.
ಶಿಕ್ಷಕ ರಾ.ಸು ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ನಾಗತಿಹಳ್ಳಿಮಂಜುನಾಥ್, ಕಾರ್ಯಧರ್ಶಿ ಮತೋಡು ರಮೇಶ್, ಶ್ರೀರಾಂಪುರ ಹೋಬಳಿ ಕ.ಸಾ.ಪ ಅಧ್ಯಕ್ಷ ಕಾಚಾಪುರ ರಂಗಪ್ಪ, ಮಾಜಿ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಉಪನ್ಯಾಸಕ ನಿಸಾರ್‌ಅಹಮ್ಮದ್, ಕವಿಯತ್ರಿ ಕುಮಾರಿ ಎಂ.ಆರ್.ನಳಿನಾ, ಸಾಹಿತಿ ನಾಗರಾಜ್, ಕ.ಸಾ.ಪ ನಿರ್ಧೇಶಕ ಅಂಬರೀಷ್, ಉಪನ್ಯಾಸಕ ಮಂಜುನಾಥ್ ಸೇರಿದಂತೆ ಸಾಹಿತ್ಯಾಸಕ್ತರು ಕ.ಸಾ.ಪ ಪದಾಧಿಕಾರಿಗಳು ಹಾಗೂ ಅನಿಕೇತನ ವಿಚಾರ ವೇದಿಕೆ ಪದಾಧಿಕಾರಿಗಳು ಉಪಸ್ಧಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.