ಹಿರಿಯೂರು :
ಸಿರಿಧಾನ್ಯಗಳು ಸಮಾಜದ ಜನರ ಆರೋಗ್ಯ ರಕ್ಷಣೆ ಮಾಡುವ ಜೊತೆಗೆ ಬೆಳೆದ ರೈತರುಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದ್ದು, ಬಿತ್ತನೆ ಬೀಜದಿಂದ ಸಂಸ್ಕರಣೆ ಬೀಜದವರೆಗೆ ಯೋಜನೆ ಕಾರ್ಯಕ್ರಮ ಮಾಡಲು ಅನುಕೂಲ, ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ರೈತರು ಸಿರಿಧಾನ್ಯ ಬೆಳೆದು ಬಳಸಬೇಕಿದೆ ಎಂಬುದಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ರಾಘವೇಂದ್ರ ಹೇಳಿದರು.
ತಾಲ್ಲೂಕಿನ ವಿವಿ ಪುರ ಯೋಜನಾಕಚೇರಿ ವ್ಯಾಪ್ತಿಯ ಯಲ್ಲದಕೆರೆ ವಲಯದ ಬ್ಯಾರಮಡು ಕಾರ್ಯಕ್ಷೇತ್ರದ ಶೇಷಪ್ಪನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಬೇಸಾಯ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿಯ ಎಫ್.ಪಿ.ಸಿಯ ಸಿಇಓ ಜಯರಾಮ್, ಕಲ್ಪಮಿತ್ರ ಎಫ್.ಪಿ.ಸಿಯ ಸಿಇಓ ಗಿರೀಶ್ ರವರು ಸಿರಿಧಾನ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕರಾದ ವಿ.ಎಸ್.ಮಲ್ಲಿಕಾರ್ಜುನಗೌಡ ನಿರಂತರ ಮತ್ತು ಸಿರಿಧಾನ್ಯದ ಅನುದಾನ ಯೋಜನೆಗಳ ಅನುದಾನದ ಬಗ್ಗೆ ಮಾಹಿತಿ ನೀಡಿದರು ಹಾಗೂ ಸೇವಾಪ್ರತಿನಿಧಿಗಳಾದ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.