ನಾಯಕನಹಟ್ಟಿ : ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇದ್ದರೂ ಕೂಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಹೋಬಳಿ ಸಂಘಟನಾ ಕಾರ್ಯದರ್ಶಿ ಓಬಯ್ಯ ಗಜ್ಜಗನಹಳ್ಳಿ ಗಂಭೀರ ಆರೋಪ ಮಾಡಿದರು.

ನಂತರ ಮಾತನಾಡಿದ ಅವರು ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲವೆಂಬ ಉಡಾಫೆ ಉತ್ತರ ನೀಡುತ್ತಿದ್ದು, ಇರುವ ವೈದ್ಯರು ಕೂಡ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಡಿ.25 ರಂದು ಬೆಳಿಗ್ಗೆ 10:30ಕ್ಕೆ ಒಳ ರೋಗಿಯೊಬ್ಬರು ದಾಖಲಾಗಿದ್ದು,ಡಿ.26 ಮಧ್ಯಾಹ್ನ 2:30 ಕೂಡ ವೈದ್ಯರು ಬಂದು ಪರೀಕ್ಷಿಸದೆ ನಿರ್ಲಕ್ಷ ತೋರಿದ್ದಾರೆ. ನರ್ಸ್ ಮಾತ್ರ ಬಂದು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು ಕಾಣಿಸಿಗುತಿದೆ. ಹಲವು ಬಾರಿ ಆಡಳಿತ ಅಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸಿಬ್ಬಂದಿಗಳು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಅವರ ಮನಸ್ಸಿಗೆ ಬಂದ ಹಾಗೆ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಆರೂಪಿಸಿದರು.