ಚಳ್ಳಕೆರೆ ಡಿ.27
ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಶಾಸಕರ ಭವನದಲ್ಲಿ ಮಾಜಿ ಪ್ರಧಾನಮಂತ್ರಿ. ಆರ್ಥಿಕ ತಜ್ಞ ದಿ. ಮನಮೋಹನ್ ಸಿಂಗ್ ರವರು ನಿಧನ ಹೊಂದಿರುವ ಪ್ರಯುಕ್ತ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದಿ.ಮನಮೋಹನ್ ಭಾವ ಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಹೆಚ್ .ಎಸ್. ಸೈಯಾದ್ .ಪ್ರಭುದೇವ್ ಮಾತನಾಡಿ
1991ರಲ್ಲಿ ಪಿ.ವಿ ನರಸಿಂಹರಾವ್ ಪ್ರಧಾನಿಯಾಗಿದ್ದರು. ಈ ವೇಳೆ ಮನಮೋಹನ ಸಿಂಗ್ ಹಣಕಾಸು ಸಚಿವರಾಗಿ ಆಯ್ಕೆಯಾಗಿದ್ದಾಗ ಭಾರತದ ಆರ್ಥಿಕತೆ ಭಾರಿ ಕೆಳಮಟ್ಟದಲ್ಲಿತ್ತು. ಆದ್ರೆ ಇಂತಹ ಸಮಯದಲ್ಲಿ ಭಾರತದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು, ನೀತಿಗಳನ್ನು ತರುವ ಮೂಲಕ ಭಾರತವನ್ನು ಆರ್ಥಿಕ ದುರಂತದಿಂದ ಪಾರಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.










ಇನ್ನು ಈ ವೇಳೆ 1991ರಲ್ಲಿ ಮೊದಲಬಾರಿಗೆ ರಾಜ್ಯಸಭೆಗೆ ಆಯ್ಕೆಯಾದ ಇವರು ನಿರಂತರವಾಗಿ ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾದರು. 2004ರಲ್ಲಿ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಇವರು ನಿರಂತರವಾಗಿ 10 ವರ್ಷಗಳ ಕಾಲ ದೇಶದ ಅಭಿವೃದ್ಧಿಗಾಗಿ ಕೆಲಸಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ ಬೀ, ಉಪಾಧ್ಯಕ್ಷೆ ಸುಮಾ ಭರಮಯ್ಯ, ನಗರಸಭೆ ಸದಸ್ಯ ಮಲ್ಲಿಕಾರ್ಜುನ. ನಾಮ ನಿರ್ದೇಶನ ಸದಸ್ಯರಾದ ಅನ್ವರ್.ನೇತಾಜಿ ಪ್ರಸನ್ನಕುಮಾರ್, ವೀರಭದ್ರ, ಹಿರಿಯ ಮುಖಂಡರಾದ, ಪಿ.ತಿಪ್ಪೇಸ್ವಾಮಿ, ಮೂಡಲಗಿರಿಯಪ್ಪ, ಮುಖಂಡರುಗಳಾದ.ಕೃಷ್ಣಮೂರ್ತಿ, ನಿಜಲಿಂಗಪ್ಪ, ಓಬಳೇಶ್, ಮೈಲಾರಪ್ಪ, ರಂಜನ್, ಜಬೀನಾ, ಭರಮಯ್ಯ, ಖಾದರ್, ಮುಖಂಡರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.