ನಾಯಕನಹಟ್ಟಿ-: ಅವಜ್ಞಾನಿಕ ಸಿಸಿ ರಸ್ತೆ ಕಾಮಗಾರಿ ಗ್ರಾಮದಲ್ಲಿ ಪ್ರಾರಂಭಿಸಿರುವುದು ತುಂಬಾ ನೋವಿನ ಸಂಗತಿ ಎಂದು ಗ್ರಾಮದ ಮುಖಂಡ ಕುಮಾರಸ್ವಾಮಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.









ಶನಿವಾರ ಎನ್. ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನುಮೈನಹಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿದರು. ಸರ್ಕಾರದ ಆದೇಶದ ಪ್ರಕಾರ ರಸ್ತೆ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್ ರವರಿಗೆ ದೂರವಾಣಿ ಮೂಲಕ ಕಾಮಗಾರಿಯ ಪರಿಶೀಲನ ಬಗ್ಗೆ ಮಾತನಾಡಿದರೆ ಜಾಸ್ತಿ ಮಾತನಾಡಬೇಡಿ ನಿಮಗೆ ಬೇಕಾದರೆ ಆರ್ಡರ್ ಕಾಪಿ ತಂದುಕೊಡುತ್ತೇವೆ ನಾವು ಹಾಗೆ ಕಾಮಗಾರಿ ಮಾಡುವುದು ಎಂದು ಸೊಬೂಬು ಹೇಳುತ್ತಿದ್ದಾರೆ ನಮಗೆ ಸಿಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದರುಗ್ರಾಮಸ್ಥರಾದ ಜಯಣ್ಣ, ಸುನಿಲ್, ಗ್ರಾ.ಪಂ. ಮಾಜಿ ಸದಸ್ಯ ಎಂ. ತಿಪ್ಪೇಸ್ವಾಮಿ, ಪ್ರಕಾಶ್, ರವಿನಾಯ್ಕ,ಸಮ್ಯಾನಾಯ್ಕ, ಸುನಿಲ್ ನಾಯ್ಕ, ಪ್ರಕಾಶ್, ಶಿವು, ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.