
ನಾಯಕನಹಟ್ಟಿ:; ವಿಪರೀತ ಮಳೆಯಿಂದ ನಾಯಕನಹಟ್ಟಿ ಚಿಕ್ಕಕೆರೆ 25 ವರ್ಷಗಳ ನಂತರ ಕೂಡಿ ಬಿದ್ದ ಹಿನ್ನೆಲೆಯಲ್ಲಿ ಭಾನುವಾರ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದ ಕಾಡುಗೊಲ್ಲ ಸಮುದಾಯದ ಜನರು ಜೋಗಿಹಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಕಾಟಂಲಿಂಗೇಶ್ವರ ದೇವರನ್ನು ಗಂಗಾ ಪೂಜೆಗೆ ಕರೆತಂದು ಚಿಕ್ಕಕೆರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ವಿಶೇಷ ಪೂಜೆಯನ್ನು ಸಲ್ಲಿಸಿದರು..





ಇದೇ ವೇಳೆ ಜೋಗಿಹಟ್ಟಿ ಗ್ರಾಮದ ಮುಖಂಡ ಒ.ಬಿ ಬಾಲಯ್ಯ ಮಾತನಾಡಿದರು ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಚಿಕ್ಕಿಕೆರೆ ಸುಮಾರು 25 ವರ್ಷದ ಬಳಿಕ ಕೋಡಿ ಬಿದ್ದಿರುವುದು ಸಂತಸ ತಂದಿದೆ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಕಾಟಂಲಿಂಗೇಶ್ವರ ಸ್ವಾಮಿಯನ್ನು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಗೆ ಕರೆತಂದು ವಿಶೇಷವಾಗಿ ಗಂಗಾ ಪೂಜೆಯನ್ನು ನೆರವೇರಿಸಲಾಗಿದೆ.
(ಹಿನ್ನೆಲೆ) ಜೋಗಿಹಟ್ಟಿಗೂ ಮತ್ತು ನಾಯಕನಹಟ್ಟಿಗೂ ಅವಿನಾಭಾವ ಸಂಬಂಧ ನಮ್ಮ ಕಾಡುಗೊಲ್ಲ ಸಮುದಾಯದ ಚನ್ನಬಾಲಜ್ಜ ಮೂಲ ಇತಿಹಾಸಕಾರರು ಅವರು ಹಿಂದೆ ದೆಹಲಿಯ ದೊರೆಯಾಗಿದ್ದರು ಅನಿರೀಕ್ಷಿತ ಅಲ್ಲಿ ಸ್ವಲ್ಪ ಸಮಸ್ಯೆಯಿಂದಾಗಿ ಬಾಲೇರ ಗೊಲ್ಲರಿಗೆ ಸಂಬಂಧಿಸಿದ ಸಂಬಂಧಪಟ್ಟ ಅವರು ನಾಯಕನಹಟ್ಟಿ ಹೂವಿನ ಕಾಲುವೆಯಲ್ಲಿ ಗೊಲ್ಲರಹಟ್ಟಿಯನ್ನು ಕಟ್ಟುತ್ತಾರೆ ನಾಯಕನಹಟ್ಟಿಯಿಂದ ಜೋಗಿಹಟ್ಟಿಯವರಿಗೆ ಚೆನ್ನ ಬಾಲಜ್ಜ ವಂಶಸ್ಥರು ಅಣ್ಣತಮ್ಮಂದಿರು ನೆಂಟರು ಎಲ್ಲರೂ ಈಗ ಜೋಗಿಹಟ್ಟಿಯಲ್ಲಿ ವಾಸ ಮಾಡುತ್ತಿರುವುದು ನಮ್ಮ ಗ್ರಾಮದಲ್ಲಿ ಯಾವುದೇ ದೇವರ ಕಾರ್ಯಗಳ ನಡೆದ ಸಂದರ್ಭದಲ್ಲಿ ದೊಡ್ಡಕೆರೆ ಮತ್ತು ಚಿಕ್ಕಕೆರೆಯಲ್ಲಿ ಗಂಗಾ ಪೂಜೆಯನ್ನು ನೆರೆವೇರಿಸಿಕೊಂಡು ಹೋಗಿ ನಾವು ದೇವರ ಕಾರ್ಯವನ್ನು ಮಾಡುತ್ತೇವೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆ ನಡೆದರೆ ರಥದ ಚಕ್ರಕ್ಕೆ ಕಾಸು ಮೀಸಲು ಮೊಸರು ಅರ್ಪಿಸುವುದು ನಮ್ಮ ಪೂರ್ವಕರ ಕಾಲದಿಂದಲೂ ನಡೆದುಕೊಂಡ ಬಂದ ಪದ್ದತಿಯಾಗಿದೆ.
ಅದರಂತೆ ಕಳೆದ 25 ವರ್ಷಗಳ ಬಳಿಕ ಇಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಚಿಕ್ಕಕೆರೆ ತುಂಬಿರುವುದರಿಂದ ಜೋಗಿಹಟ್ಟಿ ಗ್ರಾಮಸ್ಥರು ಗ್ರಾಮದ ಆರಾಧ್ಯ ದೈವ ಶ್ರೀ ಕಾಟಂಲಿಂಗೇಶ್ವರ ದೇವರನ್ನು ಗಂಗಾ ಪೂಜೆಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ ಗ್ರಾಮಕ್ಕೆ ಕರೆದೊಯ್ಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೋಗಿಹಟ್ಟಿ ಗ್ರಾಮದ ಕಾಡುಗೊಲ್ಲ ಸಮುದಾಯದ ಪೂಜಾರಿ ಮತ್ತು ದಾಸಯಗಳು ಮತ್ತು ಈರಗಾರರು ಹಾಗೂ ಯಜಮಾನರು, ಮುಖಂಡರುಗಳು, ಯುವಕರು, ಭಕ್ತಾದಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.