June 15, 2026
img-20241020-wa01763101677225128880306.jpg

ನಾಯಕನಹಟ್ಟಿ:: ಜಿಲ್ಲೆಯಲ್ಲಿ ಹಿಂದೆ ಬಿಜೆಪಿ ಸರ್ಕಾರ ಇರುವಾಗ ಅಧಿಕಾರಿಗಳನ್ನು ಬಿಟ್ಟು ಮೇಯಿಸಿದ್ದಾರೆ ನಾವು ಈಗ ಕಟ್ಟಿಹಾಕಿ ಮೇಯಿಸಲು ಹೋದರೆ ಅಧಿಕಾರಿಗಳು ಬಗ್ಗಂಗಿಲ್ಲ ಅವರದೇ ಆದ ಚರ್ಮ ದಪ್ಪವಾಗಿದೆ ಶಾಸಕರು ಎಷ್ಟೇ ಹೇಳಿದರು ಮಾತೇ ಕೇಳುತ್ತಿಲ್ಲ ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.

ಭಾನುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ 70ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಸುಭದ್ರವಾಗ ಇರಲಿದೆ ಸರ್ಕಾರ ಮತ್ತು ಮುಖ್ಯಮಂತ್ರಿ ಬದಲಾವಣೆ ಸಂದರ್ಭವೇ ಇಲ್ಲ ಸದ್ಯ ನನಗೆ ಸರ್ಕಾರ ಆಹಾರ ಖಾತೆಯನ್ನು ನೀಡಿದ್ದಾರೆ ಅದರಲ್ಲಿ ಒಳ್ಳೆ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ. ಸಚಿವ ಸ್ಥಾನ ಆಕಾಂಕ್ಷಿ ಇದ್ದೇನೆ ಸರ್ಕಾರ ಬದಲಾವಣೆ ಸಮಯದಲ್ಲಿ ಜಿಲ್ಲಾ ರಾಜ್ಯ ಮುಖಂಡರನ್ನು ಸಂಪರ್ಕಿಸಿ ತೀರ್ಮಾನಿಸುತ್ತೇವೆ ಸಚಿವ ಸ್ಥಾನ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇಲ್ಲ ಕೇಳುವ ಕೆಲಸವಿದೆ ಕೇಳುತ್ತೇವೆ ಜಿಲ್ಲೆಯಲ್ಲಿ ಹಿರಿಯ ಅನುಭವ ರಾಜಕಾರಣಿ ಎಂಬ ಪತ್ರಕರ್ತರ ಮಾತಿಗೆ ಉತ್ತರಿಸಿದ ಅವರು ಅನುಭವ ರಾಜಕಾರಣ ಈಗ ಬೇಕಿಲ್ಲ ದುಡ್ಡಿನ ರಾಜಕಾರಣ ಬೇಕು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ಸತ್ಯವನ್ನು ನುಡಿಯಬೇಕು ಹೊರತು ಅಸತ್ಯವನ್ನಲ್ಲ ಮಾಡಿದಷ್ಟು ನೀಡಿಬಿಕ್ಷೆ ಎಂಬ ಸ್ವಾಮಿಯ ವಾಣಿಯಂತೆ ಕೆಲಸ ಮಾಡಬೇಕಾಗಿದೆ. ಹೊಸದುರ್ಗ ಕ್ಷೇತ್ರದಾದ್ಯಂತ ಉತ್ತಮವಾಗಿ ಕೆಲಸ ಮಾಡಿದ್ದೇನೆ ಸಮರ್ಪಕವಾಗಿ ಅಂಡರ್ ಗ್ರೌಂಡ್ ರಿಚಾರ್ಜ್ ಮಾಡಿಸಿದ್ದೇನೆ ರಸ್ತೆಗಳು ಶಾಲಾ-ಕಾಲೇಜುಗಳು ಭದ್ರಾ ಮೇಲ್ದಂಡೆ ಯೋಜನೆ 101 ಕೆರೆಗೆ ನೀರು ಹರಿಸುವ ಕಾಮಗಾರಿ ಏಳು ನೂರು ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ತುಂಗಭದ್ರಾ ಹಿನ್ನಿರು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಸುರೇಶ್ ತಕ್ಕಡಿ, ಕಂದಿಕೆರೆ ಸುರೇಶ್ ಬಾಬು. ಬಿ.ಟಿ. ಜಗದೀಶ್, ಪಿ ರಘು, ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಹಾಲೇಶಪ್ಪ, ಕಿರಣ್ ಕುಮಾರ್, ವಸಂತ್, ಪ್ರಶಾಂತ್ ಕುಮಾರ್, ಗ್ಯಾರೆಂಟಿ ಅಧ್ಯಕ್ಷ ಶಿವಣ್ಣ ಹರೀಶ್ ನಾಯಕನಹಟ್ಟಿ ಕಾಳಪ್ಪ, ಗೌಡಗೆರೆ ರಂಗಜ್ಜ, ಸದಾಶಿವಯ್ಯ ಹಾಗೂ ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading