ಚಳ್ಳಕೆರೆ: ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಸ್ಮರಣೆ ಎಂಬುದು ಒಂದು ಕಾಯಿಲೆಯಾಗಿದೆ ಎಂಬ ಹೇಳಿಕೆಯನ್ನು ಖಂಡಿಸಿ, ಮಾದಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಭಾವಚಿತ್ರವನ್ನು ಸುಟ್ಟು ಅವರ ವಿ ಗೆರುದ್ಧ ಘೋಷಣೆಗಳನ್ನು ಕೂಗಿದರು.
ಇವಳೆ ಮಾತಾಡಿದ ಸಮುದಾಯದ ಮುಖಂಡ ಚೌಳೂರು ಪ್ರಕಾಶ್ ಬುಧವಾರ ರಾಜ್ಯಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆಯ ಸಂದರ್ಭದಲ್ಲಿ ಅಂಬೇಡ್ಕರ್ ಅಂಬೇಡ್ಕರ್ ಎಂದು ಸ್ಮರಣೆ ಮಾಡುವ ಬದಲು ದೇವರ ಜಪ ಮಾಡಿದ್ದರೆ ಮನುಷ್ಯನ ಸ್ವರ್ಗಕ್ಕೆ ಹೋಗುತ್ತಿದ್ದ ಎಂಬ ಹೇಳಿಕೆಯನ್ನು ಒಬ್ಬ ಅವಿವೇಕಿ ಅವಿದ್ಯಾವಂತ ಜನಪ್ರತಿನಿಧಿಗಳನ್ನು ಕುರಿಗಳಂತೆ ವ್ಯಾಪಾರ ಮಾಡುವ ಪ್ರವೃತ್ತಿಯನ್ನು ಹೊಂದಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಕೂಡಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಗರ ಸಭೆ ನಮ್ಮ ನಿರ್ದೇಶಕ ಸದಸ್ಯ ಬದ್ರಿ ಮಾತನಾಡಿ ಸರ್ವರಿಗೂ ಸಮಪಾಲು ಸಮಬಾಳು ದೇಶದ ಬೃಹತ್ ಸಂವಿಧಾನವನ್ನು ನಿರ್ಮಿಸಿ ಬಿಡಿ ಮಾನವ ಕುಲವೇ ಸಂವಿಧಾನದ ಗ್ರಂಥದಲ್ಲಿ ಜೀವಿಸುತ್ತಿರುವ ದೇಶದಲ್ಲಿ ಇಂತಹ ಹೇಳಿಕೆಯಿಂದ ದೇಶದ ಎಲ್ಲಾ ವರ್ಗದ ಜನರು ತಲೆತಗ್ಗಿಸುವಂತಾಗಿದೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸಂವಿಧಾನವನ್ನು ಓದದೆ ಇರುವುದರಿಂದ ಇಂತಹ ಹೇಳಿಕೆ ನೀಡಿದ್ದಾರೆ ಕೂಡಲೇ ದೇಶದ ಜನರ ಕ್ಷಮೆಯಾಚಿಸಿ ರಾಜೀನಾಮೆ ನೀಡಿ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಂತರ ಉಪ ತಹಶೀಲ್ದಾರ್ ಸದಾಶಿವಪ್ಪರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೈತ್ರಿ ದ್ಯಾಮಣ್ಣ ಆನಂದ್ ಕುಮಾರ್ ವಿಜಯ್ ಕುಮಾರ್ ಮಂಜು ಹೊನ್ನೂರ ಸ್ವಾಮಿ ರಂಗನಾಥ ಎಚ್ಎಸ್ ಸೈಯದ್ ರಂಗಪ್ಪ ನಿಜಲಿಂಗಪ್ಪ ಲಕ್ಷ್ಮೀದೇವಿ ಅನ್ನಪೂರ್ಣ ಮಂಜಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.