January 30, 2026

ಚಳ್ಳಕೆರೆ ಸ.18

ಬೀಜ ಗೊಬ್ಬರ ಹಾಕಿದ ಭೂಮಿ ಎಂದೂ
ರೈತರನ್ನು ಕೈ ಬಿಡುವುದಿಲ್ಲ ಎಂಬ ನಾಣ್ಣುಡಿ,
ಪ್ರಸ್ತುತ ರೈತರಿಗೆ ಅನ್ವಯವಾಗದಂತಹ ಸ್ಥಿತಿ
ನಿರ್ಮಾಣವಾಗಿದೆ. ಕಳದು ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಟಾವು ಮಾಡಿದ ಶೇಂಗಾ ಬೆಳೆ ಹೊಲದಲ್ಲೇ ಕೊಳೆಯುವ ಸ್ಥಿತಿ ತಲುಪಿದರೆ ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿ ಶೇಂಗಾ .ತೊಗರಿ ಬೆಳೆ ಕೀಟ ಬಾದೆ .ಕೊಳೆ.ಬೂದಿರೋಗಕ್ಕೆ ಸಿಲುಕಿ ಬೆಳೆ ನಷ್ಟಬಾಗುವ ಬೀತಿ ಎದುರಾಗಿದೆ.
ಬಿತ್ತಿದ ಬೆಳೆ ಮಳೆ ಆವಾಂತರದಿಂದ ಭೂಮಿಯಲ್ಲಿಯೇ ಕೊಳೆಯುತ್ತಿದೆ.
ಬಯಲು ಸೀಮೆಯ ಪ್ರದೇಶ
ಬರ ಪೀಡಿತ ಹಣೆಪಟ್ಟಿಕೊಟ್ಟಿಕೊಂಡಿರುವ
ತಾಲೂಕೊಂದರ ರೈತರ ಪರಿಸ್ಥಿತಿ. ಬಡವರ
ಬಾದಾಮಿ ಎಂದು ಖ್ಯಾತಿ ಪಡೆದಿರುವ
ಶೇಂಗಾ ಬೆಳೆ, ಈ ಬಾರಿಯೂ ಕೈಕೊಟ್ಟಿದೆ.
ಕೈಯಲ್ಲಿದ್ದ ಹಣವೂ ಹೋಯಿತು, ಭೂ
ತಾಯಿ ಒಡಲು ಸೇರಿದ ಬಿತ್ತನೆ ಬೀಜ
ಗೊಬ್ಬರ ಬೇಸಾಯ, ಕೂಲಿ, ರೈತರ ಶ್ರಮ
ಎಲ್ಲವೂ ವ್ಯರ್ಥವಾಗಿದೆ.
ರೈತನ ಬಾಳಿಗೆ ಆಸರೆಯಾಗಬೇಕಿದ್ದ
ಶೇ೦ಗಾ ಬೆಳೆ, ಮಳೆಗೆ ಸಿಲುಕಿ ಹೊಲದಲ್ಲೇ
ಕೊಳೆಯುತ್ತಿದೆ. ಜಾನುವಾರುಗಳಿಗೂ
ವೇವಿನ ಕೊರತೆ ಎದುರಾಗುವ ಭೀತಿರೈತರನ್ನು ಕಾಡುತ್ತಿದೆ.
ಪರಶುರಾಂಪುರ ಸೇರಿದಂತೆ ವಿವಿಧ ಕಡೆ ಮುಂಗಾರು ಹಂಗಾಮಿನಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿದ ಪ್ರಮುಖ
ವಾಣಿಜ್ಯ ಬೆಳೆ, ಶೇಂಗಾ ಕಟಾವು ಮಾಡಿದ್ದು ಮಳೆ ಸುರಿಯುತ್ತಿರಯವುದರಿಂದ ಸಾಗಿಸಲು ಹಾಗೂ ರಕ್ಷಣೆ ಮಾಡಲಯು ಅಗದೆ ಹೊಲದಲ್ಲೇ ಕೊಳೆತು ಹೋಗುತ್ತಿದೆಮ ಬಿತ್ತನೆ ನಂತರ
ಮುಂಗಾರುಮಳೆಯಕಣ್ಣಾಮುಚ್ಚಾಲೆಯಿಂದ ಹೂ ಕಟ್ಟುವಸಮಯದಲ್ಲಿ ಕೀಟ ಬಾಧೆಗೆ ತುತ್ತಾಯಿತು.ಬಿಸಿಲಿನ ತಾಪದ ನಡುವೆ ಬೆಂಕಿ ರೋಗಕ್ಕೆತುತ್ತಾಗಿ ಶೇಂಗಾ ಬೆಳೆ ಬಾಡಲು ಪ್ರಾರಂಭಿಸವಾಗಲೇ ಮಳೆ ಬಂತು ಇನ್ನೇ ಮಳೆ ಬಂತು ಅಷ್ಟೋ ಇಷ್ಟೋ ಬೆಳೆ ಕೈ ಸೇರುತ್ತದೆ ಎನ್ನುವಷ್ಟರಲ್ಲೇ ಮಳೆ ಹೆಚ್ಚಾಗಿ ಬೆಳೆ ಕೈಸೇರದಂತಾಗಿ ರೈತರ ಮೇಲೆ ಆಕಾಶವೇ ಕಳಚಿತಂತಾಗಿ ಸಾಲದ ದವಡಗೆ ಸಿಲುಕುವಂತೆ ಮಾಡಿದೆ.
ಇತ್ತ ದನ-ಕರುಗಳಿಗೆ ಶೇಂಗಾಬಳ್ಳಿ ಮೇವು ಇಲ್ಲದಂತಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಬೆಳೆ ವಿಮೆ ಬೆಳೆಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading