ಚಳ್ಳಕೆರೆ ಡಿ.17 ನಗರಸಭೆ ಕಛೇರಿ ಸಿಬ್ಬಂದಿ ವಿರುದ್ದ ಸಾರ್ವಜನಿಜಕರು ಆರೋಪ ಮಾಡಿದರು ಕ್ರಮಕೈಗೊಳದಿರುವ ಬಗ್ಗೆ ಜಿಲ್ಲಾಧಿಕಾರಿ ನಗರಭೆ ಅಧಿಕಾರಿಗಳು ವಿರುದ್ದ ನೋಟಿಸ್ ಜಾರಿ ಮಾಡಿರುವುದು ಬೆಳಕಿಗೆ ಬಂದಿದೆ.


ಜಿಲ್ಲಾಧಿಕಾರಿಗಳ ನೋಟಿಸ್ ಸಾರಂಶ
ಪಟೇಲ್ ಕೆ.ಬಿ. ಕೃಷ್ಣಗೌಡ, ಬಿ.ಜೆ.ಪಿ ಮುಖಂಡ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
ಚಳ್ಳಕೆರೆ ರವರ ದೂರು ಅರ್ಜಿ ದಿನಾಂಕ:27.11.2024
ಹಾಗೂ ಎಂ.ದಾದಾಪೀರ್, ಮುತುವಲ್ಲಿ, ಮದೀನ ಮಸೀದಿ ಚಳ್ಳಕೆರೆ ಮತ್ತು ಇತರರು ರವರು
ಜಿಲ್ಲಾಧಿಕಾರಿಗಳು ಚಿತ್ರದುರ್ಗ ರವರಿಗೆ ಸಲ್ಲಿಸಿರುವ ಅರ್ಜಿ ದಿನಾಂಕ:07.11.2024
.ಈ ಕಛೇರಿಯ ಪತ್ರ ಸಂಖ್ಯೆ:ಜಿನಕೋ (2) ಸಿಆರ್/ /2024-25 ದಿನಾಂಕ:
27.11.2024ತಮ್ಮ ಕಚೇರಿ ಪತ್ರ ಸಂಖ್ಯೆ: ನ.ಚ.ಸಿ/ಶಾ/ಸಿಆರ್/01/2024-25 ದಿನಾಂಕ:
02.12.2024
ಪಟೇಲ್ ಕೆ.ಬಿ. ಕೃಷ್ಣಗೌಡ, ಬಿ.ಜೆ.ಪಿ ಮುಖಂಡರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
ಚಳ್ಳಕೆರೆ ದೂರುದಾರರ ಅರ್ಜಿ ದಿನಾಂಕ:12.12.2024
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದ (1) ರ ದಿನಾಂಕ:27.11.2024 ದೂರಿನಲ್ಲಿ ಪಟೇಲ್
ಕೆ.ಬಿ.ಕೃಷ್ಣಗೌಡ, ಬಿಜೆಪಿ ಮುಖಂಡರು ಚಳ್ಳಕೆರೆ ಅವರು ಚಳ್ಳಕೆರೆ ನಗರಸಭೆಗೆ ಭೇಟಿ ನೀಡಿ ದಾಖಲೆಗಳನ್ನು
ಪರಿಶೀಲಿಸಿದಾಗ ದಿನಾಂಕ:06.11.2023ರ ಸಂಬಂಧ ಸಂಪೂರ್ಣ ದಾಖಲೆಗಳನ್ನು ಉದ್ದೇಶ ಪೂರ್ವಕವಾಗಿ
ನಾಶಪಡಿಸಿರುವುದು ಅವರ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿರುತ್ತಾರೆ. ದಾಖಲೆಗಳ ನಾಶದ ಹಿಂದೆ
ಪೌರಾಯುಕ್ತರು, ನಗರಸಭೆ ಚಳ್ಳಕೆರೆ ಹಾಗೂ ಕಛೇರಿ ವ್ಯವಸ್ಥಾಪಕರು ಭಾಗಿಯಾಗಿರುವುದರಿಂದ ಕೂಡಲೇ
ಅಮಾನತ್ತು ಮಾಡಿ ಸೂಕ್ತ ಇಲಾಖಾ ಕ್ರಮ ಕೈಗೊಳ್ಳುವಂತೆ ಅವರ ದೂರು ಅರ್ಜಿಯಲ್ಲಿ ತಿಳಿಸಿರುತ್ತಾರೆ. ತಮ್ಮ
ಕಛೇರಿಯಿಂದ ನೀಡಿರುವ ದಿನಾಂಕ:13.11.2024 ರ ಹಿಂಬರಹ ಮತ್ತು ಮಾಹಿತಿ ಹಕ್ಕು ಅಧಿನಿಯಮದಡಿ ನೀಡಿರುವ
ದಿನಾಂಕ:21.11.2024 ರ ಹಿಂಬರಹ ಪ್ರತಿಗಳನ್ನು ಲಗತ್ತಿಸಿರುತ್ತಾರೆ.
ಉಲ್ಲೇಖದ ಪತ್ರದ ಪ್ರತಿಯನ್ನು ಕಳುಹಿಸುತ್ತಾ ಉಲ್ಲೇಖದಲ್ಲಿನ ಅಂಶಗಳನ್ನು ಪರಿಶೀಲಿಸಿ ಈ ಕೆಳಕಂಡ
ಅಂಶಗಳ ಕುರಿತು ವಿವರವಾದ ವರದಿಯನ್ನು ಈ ಕಛೇರಿಗೆ ಸಲ್ಲಿಸಲು ಉಲ್ಲೇಖ (3) ರ ಪತ್ರದಲ್ಲಿ ತಮಗೆ
ಸೂಚಿಸಲಾಗಿರುತ್ತದೆ. ಸದರಿ ಪತ್ರದಲ್ಲಿ ದಿನಾಂಕ:05.11.2023 ಮತ್ತು 06.11.2023 ರಂದು ಯಾವುದೇ ಅರ್ಜಿ ತಮ್ಮ
ಕಛೇರಿಯ ಅವಕ-ದಾಖಲೆ ವಹಿಯಲ್ಲಿ ದಾಖಲಾಗಿರುವುದಿಲ್ಲ ಎಂಬ ವಿಷಯ ಹಾಗೂ06.11.2023
ರಂದು ಸೋಮವಾರ ಕರ್ತವ್ಯದ ದಿನವಾಗಿದ್ದು ಒಂದೂ ಸಾರ್ವಜನಿಕ ಅರ್ಜಿ ಸ್ವೀಕೃತವಾಗಿರುವುದಿಲ್ಲ ಎಂಬುದರ
ಬಗ್ಗೆ ಸ್ವಷ್ಟವಾಗಿ ವರದಿ ಸಲ್ಲಿಸಲು ಸೂಚಿಸಲಾಗಿರುತ್ತದೆ.
ಉಲ್ಲೇಖ (2) ರ ದಿನಾಂಕ:05.11.2023 ರಂದು ಜಾಮೀಯ ಮಸೀದಿ ರವರು ನೀಡಿರುವ ಪತ್ರ
ಸ್ವೀಕೃತವಾಗದಿದ್ದರೂ ನಗರಸಭೆಯ ಕಛೇರಿಯ ಮೊಹರು ಮತ್ತು ಸಿಬ್ಬಂದಿ ಸಹಿ ಇರುವುದು ಪತ್ರದ ಪ್ರತಿಯ ಮೇಲೆ
ಕಂಡುಬಂದಿರುವುದರಿಂದ ಸದರಿ
ವಿಷಯವಾಗಿ ಏನು ಕ್ರಮವಹಿಸಲಾಗಿರುತ್ತದೆ ಮತ್ತು ಒಂದು
ವೇಳೆ
ನಕಲಿಯಾಗಿದ್ದಲ್ಲಿ ಸದರಿ ನಕಲಿ ಸೀಲಿನ ಕುರಿತು ಏಕೆ ಆರಕ್ಷಕ ಠಾಣೆಯಲ್ಲಿ ದೂರು ನೀಡಿರುವುದಿಲ್ಲ ಎಂಬ ಬಗ್ಗೆ
ವರದಿ ನೀಡಲು ಸೂಚಿಸಲಾಗಿರುತ್ತದೆ.
ಉಲ್ಲೇಖ (4) ರ ಪತ್ರದಲ್ಲಿ ಚಳ್ಳಕರೆ ನಗರಸಭೆಯ ಪೌರಾಯುಕ್ತರಾದ ನೀವು
01/2024-25 06:02.12.2024
ರ ದೂರುದಾರರು ತಿಳಿಸಿರುವ
ಸಂ:ನ.ಚ.ಸಿ/ಸಿ.ಆರ್
ಅಂಶಗಳಿಗೆ ಸಂಬಂಧಿಸಿದಂತೆ
ಭಾನುವಾರ ರಜಾ
ರಂದು
ಸಮಜಾಯಿಷಿ ನೀಡಿರುತ್ತೀರಿ. ತಮ್ಮ ಸಮಜಾಯಿಷಿಯಲ್ಲಿ ದಿನಾಂಕ:05.11.2023
ದಿನವಾಗಿರುತ್ತದೆ ಮತ್ತು ದಿನಾಂಕ:06.11,2023 ರಂದು ಸೋಮವಾರವಾಗಿರುವ ಕಾರಣ ಕಛೇರಿ ಆವಧಿಯಲ್ಲಿ
ಸಾರ್ವಜನಿಕರಿಂದ ಅರ್ಜಿಗಳು ಸ್ವೀಕೃತವಾಗುವುದು ಸಾಮಾನ್ಯ ವಿಷಯವಾಗಿದ್ದು, ದಿ:06.11.2023
ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ಕಛೇರಿಯ ದೈನಂದಿನ ಕಾರ್ಯನಿರ್ವಹಣೆಯ ಒತ್ತಡದಲ್ಲಿ
ದಿನಾಂಕ:07.11.2023 ರಂದು ದಾಖಲಿಸಿರುವ ಸಾಧ್ಯತೆಗಳು ಇರುತ್ತದೆ ಎಂದು ತಿಳಿಸಿರುತ್ತೀರಿ. ಟಪಾಲು ಶಾಖೆಯ
ಗುಮಾಸ್ತರಾದ ಕೆ.ಶಿವಮೂರ್ತಿ, ದ್ವಿ.ದ.ಸ.ಇವರನ್ನು ವಿಚಾರಿಸಲಾಗಿ ಪ್ರಸ್ತಾಪಿತ ಪತ್ರವು ಕಛೇರಿಗೆ
ಸ್ವೀಕೃತವಾಗಿರುವುದಿಲ್ಲ ಹಾಗೂ ಪ್ರಸ್ತಾಪಿತ ಪತ್ರಕ್ಕೆ ಟಪಾಲು ನೋಡಿಕೊಳ್ಳುವ ಸಿಬ್ಬಂದಿಯಾಗಿ ಅವರು ಕಛೇರಿಯ
ಮೊಹರು ಮತ್ತು ಸಹಿಯನ್ನು ಹಾಕಿರುವುದಿಲ್ಲ ಎಂದು ತಿಳಿಸಿರುವುದಾಗಿ ವರದಿಸಿರುತ್ತೀರಿ. ಮುಂದುವರೆದು, ಸದರಿ
ವಿಷಯವನ್ನು ಸಾಮಾನ್ಯ ವಿಷಯವೆಂದು ಪರಿಗಣಿಸಿ ಆರಕ್ಷಕ ಠಾಣೆಯಲ್ಲಿ ದೂರನ್ನು ನೀಡಲಾಗಿರುವುದಿಲ್ಲ ಎಂದು
ತಿಳಿಸಿರುತ್ತೀರಿ. ದೂರುದಾರರು ಅವರ ದೂರಿನಲ್ಲಿ ತಿಳಿಸಿರುವಂತೆ ಪೌರಾಯುಕ್ತರು ಮತ್ತು ಕಛೇರಿ ವ್ಯವಸ್ಥಾಪಕರು
ಕಛೇರಿ ದಾಖಲಾತಿಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿರುತ್ತಾರೆ ಎಂಬುದು ಸುಳ್ಳು ಆರೋಪವಾಗಿರುತ್ತದೆ
ಎಂದು ತಿಳಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲು ಕೋರಿರುತ್ತೀರಿ.
ಪರಿಶೀಲಿಸಲಾಗಿ, ಚಳ್ಳಕೆರೆ ನಗರಸಭೆಯಲ್ಲಿ ಟಪಾಲು ವಿಭಾಗದ ಕರ್ತವ್ಯ ನಿರ್ವಹಣೆ ತೀರಾ ಕಳಪೆ
ಆಗಿರುತ್ತದೆ. ಈ ಹಿಂದೆಯು ಸಹ ಐ.ಸಿ.ಐ.ಇ.ಐ ಬ್ಯಾಂಕ್ ಸೀಲುಗಳನ್ನು ನಕಲಿ ಮೊಹರು ಹಾಕಿದ ಚಲನ್‌ಗಳು
ನಗರಸಭೆ ಕಛೇರಿಯಲ್ಲಿ ನೀಡಲಾಗಿದ್ದು ಅದರಿಂದ ವಾಸ್ತವವಾಗಿ ನಗರಸಭೆಗೆ ಹಣ ಸ್ವೀಕೃತವಾಗದಿದ್ದರೂ ನಕಲಿ
ಸೀಲಿನ ಕಾರಣದಿಂದ ನಗರಸಭೆಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿರುತ್ತದೆ. ಸರ್ಕಾರಿ ಕಛೇರಿಯಾದ
ನಗರಸಭೆಯ ಸೀಲುಗಳು ಬೇಕಾಬಿಟ್ಟಿಯಾಗಿ ದುರುಪಯೋಗವಾಗುತ್ತಿದ್ದರೂ ನಗರಸಭೆಯ ಪೌರಾಯುಕ್ತರು ಸದರಿ
ವಿಷಯವನ್ನು ನಿರ್ಲಕ್ಷ್ಯಸಿ ಬೇಜಾಬ್ದಾರಿತನ ತೋರಿರುವುದು ಸಾರ್ವಜನಿಕ ವಲಯದಲ್ಲಿ ಸರ್ಕಾರಿ ಕಛೇರಿಗಳ ಕುರಿತು
ಸಂಶಯಕ್ಕೆ ಎಡೆಮಾಡಿಕೊಟ್ಟಿರುತ್ತದೆ. ಆದುದರಿಂದ, ನಕಲಿ ಸೀಲುಗಳ ಮೂಲ ಕಂಡುಹಿಡಿಯುವ ಅವಶ್ಯವಿದ್ದು ತಮ್ಮ
ಕಛೇರಿ ವ್ಯಾಪ್ತಿಯ ಆರಕ್ಷಕ ಠಾಣೆಯಲ್ಲಿ ಶಂಕಿತರ ಕುರಿತು ದೂರುದಾಖಲಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ವೆಂಕಟೇಸ್ ನೋಟಿಸ್ ಜಾರಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.