February 16, 2026
IMG-20260216-WA0247.jpg

ಚಳ್ಳಕೆರೆ: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಬಿಎಮ್‌ಸಿ (Bulk Milk Cooling) ಕೇಂದ್ರಗಳ ಕ್ಲಸ್ಟರ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ಇಂದು ಹೆಗ್ಗೆರೆ, ಹೊಟ್ಟಪ್ಪನಹಳ್ಳಿ, ಸಿದ್ದಾಪುರ ಹಾಗೂ ಸೋಮಗುದ್ದು ಗ್ರಾಮಗಳಲ್ಲಿ ನಡೆಯಿತು.

ಈ ಸಭೆಗಳಿಗೆ ಶಿಮುಲ್ ಜಿಲ್ಲಾ ನಿರ್ದೇಶಕರಾದ ಗೌರವಾನ್ವಿತ ಶ್ರೀ ಬಿ.ಸಿ. ಸಂಜೀವ ಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಕ್ಕಪಕ್ಕದ ಹಳ್ಳಿಗಳಿಂದ ಬಿಎಮ್‌ಸಿ ಕೇಂದ್ರಗಳಿಗೆ ಆಗಮಿಸುತ್ತಿರುವ ಹಾಲಿನ ಗುಣಮಟ್ಟ (ಕ್ವಾಲಿಟಿ), ಸಂಘಗಳ ಕುಂದು-ಕೊರತೆಗಳು ಹಾಗೂ ಸಂಬಂಧಪಟ್ಟ ಪಶುವೈದ್ಯರು ರಾಸುಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ವಿಮಾ ಸೌಲಭ್ಯಗಳ ಕುರಿತು ಸವಿವರವಾಗಿ ಮಾಹಿತಿ ಪಡೆದರು.
ಅಲ್ಲದೆ, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯುವ ವಿವಿಧ ಸೌಲಭ್ಯಗಳು, ಯೋಜನೆಗಳು ಮತ್ತು ಬೆಂಬಲ ಕ್ರಮಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು. ಹಾಲಿನ ಗುಣಮಟ್ಟ ಕಾಪಾಡುವಿಕೆ ಹಾಗೂ ಸಂಘಗಳ ಆಡಳಿತಾತ್ಮಕ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಉಪವಿಭಾಗದ ಅಧಿಕಾರಿ ಶ್ರೀ ಎಂ. ಪುಟ್ಟರಾಜ್ ಹಾಗೂ ಮಾರ್ಗ ವಿಸ್ತರಣಾಧಿಕಾರಿ ನಯಾಜ್ ಬೇಗ್ ಉಪಸ್ಥಿತರಿದ್ದರು.
ಸಭೆಯಲ್ಲಿ ಬಿಎಮ್‌ಸಿ ಕೇಂದ್ರಗಳಿಗೆ ಹಾಲು ಸರಬರಾಜು ಮಾಡುತ್ತಿರುವ ಚಿಕ್ಕೇನಳ್ಳಿ, ಬೆಳಗೆರೆ, ಕಲಮರಹಳ್ಳಿ, ಹುಲಿಕುಂಟೆ, ನಗರಗೆರೆ, ಉಪಾರೆಡ್ಡಿಹಳ್ಳಿ, ರೆಡ್ಡಿಹಳ್ಳಿ, ಗೋಪನಹಳ್ಳಿ, ಕಮ್ಮತ್ ಮರ್ಕುಂಟೆ, ಹೊನ್ನೂರು, ಭೋಗನಳ್ಳಿ, ಘಟಪರ್ತಿ, ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಗೊರ್ಲಕಟ್ಟೆ ಹಾಗೂ ವೀರ್ದಿಮ್ಮನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಸಭೆ ಫಲಪ್ರದವಾಗಿ ನಡೆದಿದ್ದು, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಲಾಯಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading