December 14, 2025
IMG-20251007-WA0253.jpg

ಚಳ್ಳಕೆರೆ ಸೆ.13 ಗ್ರಾಪಂ ಅಧ್ಯಕ್ಷೆಯ ಪತಿ ಖಾತೆಗೆ ಸರಕಾರದ ಹಣ ಅಧ್ಯಕ್ಷೆಯ ಸದಸ್ಯತ್ವ ರದ್ದಿಗೆ ಸರಕಾರಕ್ಕೆ ಶಿಪಾರಸ್ ಮಾಡಿರುವುದು ಬೆಳಕಿಗೆ ಬಂದಿದೆ.

ಹೌದು ಇದು ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮಪಂಚಾಯಿತಿಯಲ್ಲಿ ಅಕ್ಟೋಬರ್-2024 ರಿಂದ ಮಾರ್ಚ್-2025ರ ವರೆಗಿನ ಅವಧಿಯಲ್ಲಿ ವರ್ಗ-1ರಲ್ಲಿ ಕೆಟಿಪಿಪಿ ನಿಯಮ ಉಲ್ಲಂಘಿಸಿ ವೆಚ್ಚ
ಭರಿಸಲಾಗಿದ್ದು, ಅದರಲ್ಲಿ ಸುಮಾರು ರೂ.188865/-ಗಳನ್ನುನಿಯಮ ಉಲ್ಲಂಘಿಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆದೇಶದಂತೆ
ಅಧ್ಯಕ್ಷೆಯ ಪತಿ ಪಿ.ಹೊನ್ನೂರಪ್ಪ ಇವರ ಖಾತೆಗೆ ಪಾವತಿಸಿರುವುದರಿಂದ ಸದರಿ ಅಧ್ಯಕ್ಷೆ ಆರ್.ಜಯಲಕ್ಷ್ಮಿ,
ಇವರ ಸದಸ್ಯತ್ವ ರದ್ದುಗೊಳಿಸುವ ಮತ್ತು ಸರ್ಕಾರ ಆದೇಶ/ಮಾರ್ಗಸೂಚಿಗಳನ್ನು ಅನುಸರಿಸದೆ ಸದರಿ ಮೊತ್ತವನ್ನು ಪಾವತಿಸಿರುವ
ಪಿ.ಹನುಮಂತಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸೋಮಗುದ್ದು ಗ್ರಾಮ ಪಂಚಾಯತಿ ಇವರ ವಿರುದ್ಧ ಕರ್ನಾಟಕ ನಾಗರೀಕ
ಸೇವಾ ನಿಯಮಾವಳಿ 1957ರ ನಿಯಮಗಳನ್ವಯ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ
ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಗ್ರಾಮಗಳ ಅಭಿವೃದ್ಧಿಗೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಪಂಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತದೆ ಇದನ್ನೇ ಬಂಡವಾಳ ಮಾಡಿಕೊಂಡ , ಗ್ರಾಪಂ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸೇರಿ ಕಾಮಗಾರಿಗಳನ್ನೇ ಮಾಡದೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದವು .ದೂರುಗಳ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸಿ ಹಣ ದುರ್ಬಳಕೆ ಹೆಸರಿನಲ್ಲಿ ಪಿಡಿಒ ಗಳನ್ನು ಮಾತ್ರ ಅಮಾನತು ಮಾಡುತ್ತಿದ್ದರು.
ಹಣ ದುರ್ಬಳಕೆ ಕೇವಲ ಪಿಡಿಒ ಒಬ್ಬರಿಂದ ಮಾತ್ರವಲ್ಲ ಹಣ ಬಿಡಿಸಲು ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಪಾತ್ರವಿರುತ್ತದೆ ಆದರೂ ಪಿಡಿಒ ಒಬ್ಬರನ್ನೇ ಅಮಾನತು ಮಾಡುತ್ತಿದ್ದರು.
ಈಗ ಸೋಮಗುದ್ದು ಗ್ರಾಮಪಂಚಾಯಿತಿಯಲ್ಲಿ ಹಣ ದುರ್ಬಳಕೆ ಆರೋಪದಲ್ಲಿ ಗ್ರಾಪಂ ಅಧ್ಯಕ್ಷೆಯ ಸದಸ್ಯತ್ವ ಅನರ್ಹಗೊಳಿಸಲು ಹಾಗೂ ಪಿಡಿಒ ಅಮಾನತು ಇಬ್ಬರಿಗೂ ಶಿಕ್ಷೆಯಾಗಲಿದೆ ಇದೇ ರೀತಿ ಎಲ್ಲಾ ಗ್ರಾಮಪಂಚಾಯಿತಿ ಕಚೇರಿಗಳಲ್ಲೂ ಸಹ ಹಣ ದುರ್ಬಳಕೆ ಆರೋಪದಡಿಯಲ್ಲಿ ಬಾಗಿಯಾದ ಅಧ್ಯಕ್ಷ. ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದರೆ,ಸರಕಾರದ ಹಣ ದುರ್ಬಳಕೆ ಪ್ರಕರಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading