May 12, 2026
rajiv-gandhi-housing-2026-04-09-13-34-15.jpg

ಚಳ್ಳಕೆರೆ 2018ರ ಸಮೀಕ್ಷೆಯಲ್ಲಿ ಕೈಬಿಟ್ಟಿರುವ ಅರ್ಹ ವಸತಿ ಮತ್ತು ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಸರ್ಕಾರ ಇದೀಗ ಅಂತಿಮ ಅವಕಾಶ ನೀಡಿದ್ದು, ಮೇ 15ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಾಲೂಕು ಪಂಚಾಯಿತಿ ಕಾರ್ಯಾಲಯ ತಿಳಿಸಿದೆ.
ಆದರೆ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕುರಿತು ಸಮರ್ಪಕವಾಗಿ ಜನಜಾಗೃತಿ ಮೂಡಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸಮಯ ಕೂಲಿ ಕೆಲಸ, ಹೊಲ-ಗದ್ದೆ ಹಾಗೂ ತೋಟಗಳಲ್ಲಿ ನಿರತರಾಗಿರುವುದರಿಂದ ಅವರಿಗೆ ಈ ಮಾಹಿತಿಯೇ ತಲುಪುತ್ತಿಲ್ಲ. ಮೇ ೧೫ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದರೂ ಪಂಚಾಯಿತಿ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಗ್ರಾಮೀಣ ಭಾಗದಲ್ಲಿ ಟಾಂಟಾಂ ಹೊಡೆಸಿ, ಸಾರ್ವಜನಿಕ ಘೋಷಣೆ ಮಾಡುವ ಮೂಲಕ ವಸತಿ ರಹಿತರಿಗೆ ಮಾಹಿತಿ ತಲುಪಿಸುವಂತೆ ಗೌರಸಮುದ್ರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ್ ಒತ್ತಾಯಿಸಿದ್ದಾರೆ. ಜೊತೆಗೆ ಅರ್ಹ ಫಲಾನುಭವಿಗಳು ಈ ಅವಕಾಶದಿಂದ ವಂಚಿತರಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading