May 12, 2026
IMG-20260512-WA0201.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಸೇವಾ ಕಾರ್ಯ ಅತ್ಯಮೂಲ್ಯವಾದದು ಎಂದು ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಅರವಳಿಕೆ ತಜ್ಞ ವೈದ್ಯೆ
ಡಾ.ದೇವಿಕಾ ಹೇಳಿದರು.

ಅವರು ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಪ್ರತಿನಿತ್ಯ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವರ ಆರೋಗ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬರುತ್ತಿರುವ ದಾದಿಯರ ಸೇವೆಯು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ರಾತ್ರಿ ಎನ್ನದೆ ಪ್ರತಿನಿತ್ಯ ಕಾರ್ಯ ನಿರ್ವಹಿಸುವ ಮೂಲಕ ಆರೋಗ್ಯ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ದಾದಿಯರು ಮತ್ತು ಆರೋಗ್ಯ ಸಿಬ್ಬಂದಿಗಳ ಕರ್ತವ್ಯ ಅತ್ಯಂತ ಶ್ರೇಷ್ಠವಾದದು ಎಂದರು.

ಈ ಸಂದರ್ಭದಲ್ಲಿ ಆಧುನಿಕ ನರ್ಸಿಂಗ್ ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿoಗೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ವಿಶ್ವದಾದಿಯರ ದಿನಾಚರಣೆ ಪ್ರಯುಕ್ತ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಾದಿಯರುಗಳನ್ನು ಡಾ.ದೇವಿಕ ಅವರು ಸನ್ಮಾನಿಸುವ ಮೂಲಕ ಗೌರವಿಸಿ ಸಿಹಿ ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಕೀರ್ತಿ, ಡಾ.ಮಮತಾ, ಡಾ.ವಸುದ, ಸಿಬ್ಬಂದಿಗಳಾದ ಪ್ರದೀಪ್ ಕುಮಾರ್, ಅಶ್ವಿನಿ, ಪುಷ್ಪಲತಾ, ಸಬೀನಾ, ಲೀಲಾವತಿ, ನಾಜಿಮ ಕೌಸರ್, ನೇತ್ರಾವತಿ, ಕೆ.ಸಿ.ನವೀನ್, ಶಾರದಮ್ಮ, ಲಕ್ಷ್ಮಣ್, ಶಿವಕುಮಾರ್, ಕೆ.ಎಲ್.ಸಿದ್ದಲಿಂಗಪ್ಪ, ಶ್ರೀಮಂತ, ಮಧುಚಂದ್ರ, ಯಶವಂತ್, ವಿವೇಕಾನಂದ, ಶ್ರೀಕಾಂತ್, ರಾಜೀವ್, ಶೋಭಮ್ಮ, ದಾದಿಯರು, ಆಸ್ಪತ್ರೆ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading