May 12, 2026
IMG-20260510-WA0336.jpg

ನಾಯಕನಹಟ್ಟಿ-: ಸಮೀಪದ ನಲಗೇತನಹಟ್ಟಿ ಗ್ರಾಮದಲ್ಲಿ ಭಾನುವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಸ್ಥಳೀಯ ಅಂಬೇಡ್ಕರ್ ಯುವಕ ಸಂಘ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ನಲಗೇತನಹಟ್ಟಿ ಗ್ರಾಮದ ಹಿರಿಯ ಮುಖಂಡರಾದ ಪಿ.ಎಂ. ಪೂರ್ಣ ಓಬಯ, ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ತಮ್ಮ ಬದುಕು ಕಟ್ಟಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬ ನಾಗರಿಕರಿಗೂ ಬದುಕುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ ಯಾವ ಜಾತಿಗೂ ತಾರತಮ್ಮ ಮಾಡದೆ ಎಲ್ಲರಿಗೂ ಬದುಕುವ ಹಕ್ಕನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಈ ಮೂಲಕ ನಮ್ಮ ದೇಶವು ವಿಶ್ವದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ ಅಂಬೇಡ್ಕರ್ ಅಜರಾಮರರಾಗಿ ಹಾಗೂ ಸಮಾನತೆಯ ಹರಿಕಾರರಾಗಿ ಹೊರಹಮ್ಮಿದ್ದಾರೆ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ದಲಿತ ಹೋರಾಟಗಾರ ಕೆ.ಬಿ. ನಾಗರಾಜ್, ಜೆ.ಜೆ. ಹಟ್ಟಿ, ತಿಪ್ಪೇಸ್ವಾಮಿ, ಲೀಡ್ಕರ್ ಶಂಕರ್, ಮೋಹನ್ ಕುಮಾರ್, ಚನ್ನಗಾನಹಳ್ಳಿ ಮಲ್ಲೇಶ್, ಗ್ರಾಮ ಪಂಚಾಯತಿ ಸದಸ್ಯ ಬೋರಮ್ಮ ಮೇಕೆ ಬೋರಯ್ಯ, ಪೂಜಾರಿ ತಿಮ್ಮಯ್ಯ,
ಹೊನ್ನೂರಪ್ಪ, ನಾಯಕನಹಟ್ಟಿ ಚೌಡಪ್ಪ ,ಬಸವರಾಜ್, ಜೋಗಿಹಟ್ಟಿ ವಿಶ್ವನಾಥ್, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ದಾಸರ ತಿಪ್ಪೇಸ್ವಾಮಿ ಕಾಳೇಕ್ಯಾಸಯ್ಯ, ಎಂ. ಬಿ. ಸಣ್ಣ ಬೋರಯ್ಯ, ಡಿ.ಟಿ. ಬಸವರಾಜ್, ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading