January 29, 2026
1765331454545.jpg

ಹಿರಿಯೂರು :
ರಾಜ್ಯ ಸರ್ಕಾರ ಕೈಗೊಂಡಿರುವ 35,000 ಸರ್ಕಾರಿ ಶಾಲೆಗಳ ಸಾಮೂಹಿಕ ಮುಚ್ಚುವಿಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಲೀನಗೊಳಿಸುವಿಕೆಯು ರಾಜ್ಯವನ್ನು ‘ಶೈಕ್ಷಣಿಕ ದುರಂತ’ದ ಕಡೆಗೆ ಕೊಂಡೊಯ್ಯುತ್ತಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿರಮೇಶ್ ಅವರು ಗುಡುಗಿದ್ದಾರೆ.
ರಾಜ್ಯದಲ್ಲಿ 35,000 ಸರ್ಕಾರಿ ಶಾಲೆಗಳ ಸಾಮೂಹಿಕ ಮುಚ್ಚುವಿಕೆ ನಿರ್ಧಾರದ ಬಗ್ಗೆ ರಾಜ್ಯದಲ್ಲಿ ಎಲ್ಲೆಡೆ ಆವರಿಸಿರುವ ಮೌನವನ್ನು ಅವರು ತೀವ್ರವಾಗಿ ಖಂಡಿಸಿದ್ದು, ಹೋರಾಟಗಾರರತ್ತ ಬೆರಳು ಮಾಡಿ “ಎಲ್ಲಿದ್ದೀರಾ ಆಂದೋಲನ ಜೀವಿಗಳೇ?” ಅನ್ಯಾಯವನ್ನು ಪ್ರತಿಭಟಿಸುವ ಧೈರ್ಯವಿಲ್ಲವೇ ಎಂಬುದಾಗಿ ನೇರಸವಾಲು ಹಾಕಿದ್ದಾರೆ.
ಇತ್ತೀಚಿನ ಸರ್ಕಾರದ ನಡೆಗಳನ್ನು ಗಮನಿಸಿದರೆ ರಾಜ್ಯದಲ್ಲಿ 7 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ತರಾತುರಿಯಲ್ಲಿ ಸಾವಿರಾರು ಕೋಟಿಗಳನ್ನು ವಿನಿಯೋಗಿಸಲು ಮುಂದಾಗಿದ್ದಾರೆ, ಈಗಿರುವ ಗ್ರಾಮೀಣ ಭಾಗದ ಶಾಲೆಗಳು ಸ್ವತಂತ್ರ ಪೂರ್ವದ ಪಳೆಯುಳಿಕೆಗಳನ್ನು ನೆನಪಿಸುವಂತೆ ಇವೆ .
ಆದರೆ ಅವುಗಳನ್ನು ಮರುನಿರ್ಮಾಣ ಮಾಡುವ ಕಡೆಗೆ ಹೋಗುವ ಬದಲು ಗ್ರಾಮ ಪಂಚಾಯತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿ .ಅಲ್ಲಿ ಆಕರ್ಷಣೀಯವಾಗಿ ಎಲ್.ಕೆ.ಜಿಯಿಂದ ಪ್ರಾರಂಭಿಸಿ ಎರಡನೇ ಪಿಯುಸಿ ವರೆಗೂ ಒಂದೇ ಸೂರಿನಡಿಯಲ್ಲಿ ಶಿಕ್ಷಣ ಒದಗಿಸಬೇಕೆನ್ನುವ ಕಲ್ಪನೆ ನೋಡಲು ಅತ್ಯಂತ ಆಕರ್ಷಕವಾಗಿದೆ.
ಆದರೆ, ಅದರ ಒಳಹೋದರೆ ವಿಷಕನ್ಯೆಯಂತೆ ಕಂಗೊಳಿಸುತ್ತದೆ. ಶಿಕ್ಷಣ ಇಲಾಖೆಯ ನಿಜವಾದ ಆಡಳಿತ ಶಿಕ್ಷಣ ಸಚಿವರ ಕೈಯಲ್ಲಿ ಇಲ್ಲ. ಐ.ಎ.ಎಸ್. ಅಧಿಕಾರಿಗಳ ಕೈಯಲ್ಲಿದೆ. ಅವರು ತಮ್ಮ ಆಡಳಿತಕ್ಕೆ ಅನುಕೂಲವಾಗಲಿ, ಗ್ರಾಮೀಣ ಶಾಲೆಗಳಿಗೆ ಭೇಟಿ ಕೊಡುವುದು ಅನುದಾನ ಕೊಡುವುದು ಇದರಿಂದ ನಮಗೇನು ಲಾಭವಿರುವುದಿಲ್ಲ.
ಶಿಕ್ಷಣ ಇಲಾಖೆಯ ನಿಜವಾದ ಆಡಳಿತ ಶಿಕ್ಷಣ ಸಚಿವರ ಕೈಯಲ್ಲಿ ಇಲ್ಲ. ಇದು ಕೆಲವೇ ಕೆಲವು ಐಎಎಸ್ ಅಧಿಕಾರಿಗಳ ಕೈಯಲ್ಲಿ ಕೇಂದ್ರೀಕೃತವಾಗಿದೆ.ಗ್ರಾಮೀಣ ಶಾಲೆಗಳಿಗೆ ಭೇಟಿ ಕೊಡುವುದು ಅನುದಾನ ಕೊಡುವುದರಿಂದ ಈ ಅಧಿಕಾರಿಗಳಿಗೆ ಯಾವುದೇ ಲಾಭವಿಲ್ಲ ಆದರೆ, ಒಂದೇ ಜಾಗದಲ್ಲಿ ಎಲ್.ಕೆ.ಜಿ. ಯಿಂದ ಪಿ.ಯು.ಸಿ.ವರೆಗೆ ಶಾಲೆಗಳನ್ನು ವಿಲೀನಗೊಳಿಸಿದರೆ, ಅಲ್ಲಿಂದ ಬರುವ ಅನುದಾನವನ್ನು ಸುಲಭವಾಗಿ ಗುಳುಮ್ ಮಾಡಲು ಅನುಕೂಲವಾಗುತ್ತದೆ ಎನ್ನುವ ದುಷ್ಟ ಮುಂದಾಲೋಚನೆಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಭಾರತದ ಬಿಹಾರ, ಉತ್ತರ ಪ್ರದೇಶಗಳಲ್ಲಿ ಶಿಕ್ಷಣವಿಲ್ಲದೆ ಮಕ್ಕಳು ಕೂಲಿಗೋಸ್ಕರ ಇಡೀ ದೇಶದಾದ್ಯಂತ ವಲಸೆ ಹೋಗುತ್ತಿರುವ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ ಆಫ್ರಿಕಾ ಖಂಡದ ಹಿತೋಪಿಯಾ, ಸೋಮಾಲಿಯಾದಂಥ ಪ್ರದೇಶಗಳ ಮಕ್ಕಳ ದಾರುಣ ಪರಿಸ್ಥಿತಿಯನ್ನು ಉದಾಹರಿಸಿದ ಅವರು, ಖಾಸಗಿ ಶಾಲೆಗಳ ಹಾವಳಿಯ ನಡುವೆ ಸರ್ಕಾರಿ ಶಾಲೆಗಳ ಮುಚ್ಚುವಿಕೆಯು ಅವಕಾಶ ವಂಚಿತ ಮಕ್ಕಳ ಶಿಕ್ಷಣದ ಕೊನೆಯ ಆಸರೆಯನ್ನೂ ನಾಶ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading