ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಪಟ್ಟಣದ ವಿನಾಯಕ ರಂಗಮAದಿರದಲ್ಲಿ ಅ.೧೧ ರಿಂದ ಅ.೨೧ ರವರೆಗೆ ಒಟ್ಟು ೧೧ ದಿನಗಳ ಕಾಲ ಆಯೋಜನೆಗೊಂಡಿರುವ ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ಅ.೧೧ ರಂದು ಭಾನುವಾರ ಬೆಳಿಗ್ಗೆ ೯.೦೫ ರಿಂದ ೧೦.೦೫ ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಶ್ರೀ ದುರ್ಗಾದೇವಿ ಅಮ್ಮನವರ ಮೂರ್ತಿ ಪ್ರತಿಷ್ಟಾಪನೆಗೊಳ್ಳಲಿದೆ, ಇಲ್ಲಿ ಪ್ರತಿಷ್ಟಾಪಿಸುವ ದೇವಿಯ ಮೂರ್ತಿಯನ್ನು ನೋಡಲೆಂದೆ ರಾಜ್ಯದ ವಿವಿದೆಡೆಯಿಂದ ಭಕ್ತರು ಇಲ್ಲಿಗೆ ಬೇಟಿ ನೀಡಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದಸರಾ ಮಹೋತ್ಸವ ದೇವಿಯ ಮೂರ್ತಿ ಹಾಗೂ ಅರಾಧನಾ ಪದ್ದತಿಯ ಕಾರಣದಿಂದಲೇ ಪ್ರಸಿದ್ದಿ ಪಡೆದಿದೆ. ಕೋಟೆ ನಾಡಿನಲ್ಲಿ ಆಚರಿಸಲ್ಪಡುವ ವಿಶೇಷ ಉತ್ಸವವಾಗಿದೆ.
ಮೂರ್ತಿ ತಯಾರಕರು: ಈ ಭಾರಿ ಒಂಬತ್ತು ಅವತಾರಗಳ ಮೂರ್ತಿಗಳು ಹಾಗೂ ದುರ್ಗಾ ಪರಮೇಶ್ವರಿ ದೇವಿ ಸೇರಿದಂತೆ ಒಟ್ಟು ಹತ್ತು ದೆವಿಯ ಮೂರ್ತಿಗಳನ್ನ ಕುಂದಾಪುರ ತಾಲೂಕಿನ ಕೆರ್ಕ್ಕೆರಾ ಗ್ರಾಮದ ಮೂರ್ತಿ ಶಿಲ್ಪಿ ಜಿ.ಡಿ.ಭಟ್ಟ್, ಹೊನ್ನಾವರದ ಮೋಹನ್ ಹಾಗೂ ಅವರ ತಡದವರು ಮತ್ತು ನಿರ್ಮಾಣ ಮಾಡಿ ಅಂತಿಮ ಸ್ಪರ್ಷ ನೀಡಿದ್ದಾರೆ.
ಸುಮಾರು ಆರೂವರೆ ಆಡಿ ಎತ್ತರದ ಸಿಂಹಾರೂಢ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಮೂರ್ತಿಯನ್ನು ಜೇಡಿ ಮಣ್ಣು, ಭತ್ತದ ಹುಲ್ಲು, ಚಳ್ಳೆ ನಾರು ಬಳಸಿ ತಯಾರಿಸಲಾಗುತ್ತಿದೆ. ದುರ್ಗಾ ಪಾರಾಯಣದಲ್ಲಿ ವರ್ಣಿಸಿರುವಂತೆ ಹತ್ತು ಕೈಗಳು, ಅವುಗಳಲ್ಲಿ ಶಂಕ, ಚಕ್ರ, ಗಧೆ, ತ್ರಿಶೂಲ ಮತ್ತಿತರ ಆಯುಧಗಳನ್ನು ಹಿಡಿದಿರುವ ದೇವಿಯ ಮೂರ್ತಿಯು ಜೀವಂತಿಕೆಯ ಸ್ಪರ್ಶ ಹೊಂದಿದೆ. ನೈಸರ್ಗಿಕವಾದ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸುವ ಮೂಲಕ ನೈಜತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಮಣ್ಣಿನಿಂದ ನಿರ್ಮಾಣಗೊಂಡಿರುವ ದೇವಿಗೆ ರೇಷ್ಮೆ ಸೀರೆ ಹಾಗೂ ಸ್ವರ್ಣಾಭರಣಗಳನ್ನು ಉಪಯೋಗಿಸಿ ಅಂತಿಮ ಸ್ಪರ್ಶ ನೀಡಲಾಗುತ್ತದೆ. ವಿಗ್ರಹ ನಿರ್ಮಾಣವನ್ನು ಸಂಪೂರ್ಣವಾಗಿ ಜೆ.ಡಿ.ಭಟ್ ಮಾಡಿದ್ದು. ಅವರ ಸಹೋದರನ ಮಗ ಮೂರ್ತಿ ಭಟ್ ನುಣುಪಾಗಿಸುವ ಕೆಲಸ ಮಾಡಿದ್ದಾರೆ. ರಾಮಚಂದ್ರಶೆಟ್ಟಿ ಹಾಗೂ ಗಣೇಶ ಶೆಟ್ಟಿ ಬಣ್ಣ ಹಾಕುವ ಕೆಲಸ ಮಾಡಿದರೆ ಹೊನ್ನಾವರ ಮೋಹನ್ ಎಲ್ಲರೊಂದಿಗೂ ಸೇರಿ ೧೦ ಮೂರ್ತಿಗಳ ನಿರ್ಮಾಣಕ್ಕೆ ಸಂಪೂರ್ಣ ಕೈ ಜೋಡಿಸಿದ್ದಾರೆ.
ಬಾಕ್ಸ್ ಐಟಂ
ದಸರಾ ಮಹೋತ್ಸವ ಅರಂಭವಾದ ಪ್ರಥಮ ವರ್ಷದಿಂದಲೂ ಜೆ.ಡಿ ಭಟ್ ವಿಗ್ರಹ ನಿರ್ಮಾಣ ಮಾಡುತ್ತಿದ್ದಾರೆ. ನಯನ ಮನೋಹರವಾಗಿ ನಿರ್ಮಾಣಗೊಳ್ಳುವ ವಿಗ್ರಹ ನೋಡಿದ ತಕ್ಷಣ ಜನರಲ್ಲಿ ಭಕ್ತಿ ಮೂಡುತ್ತದೆ.
ಟಿ.ಮಂಜುನಾಥ,ಅಧ್ಯಕ್ಷರು
ದುರ್ಗಾ ಸೇವಾ ಸಮಿತಿ,ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.