March 17, 2026
IMG-20250310-WA0014.jpg





ನಾಯಕನಹಟ್ಟಿ : ಮಾರ್ಚ್16ರಂದು ನಡೆಯಲಿರುವ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆಯ ಪ್ರಯುಕ್ತ ಭಾನುವಾರ ರಾತ್ರಿ ಸ್ವಾಮಿಯ ಉತ್ಸವ ಮೂರ್ತಿಗೆ ಸಂಪ್ರದಾಯದಂತೆ ಶಾಸ್ತ್ರೋ ಕ್ತವಾಗಿ ಕಂಕಣಧಾರಣೆ ಕಾರ್ಯ ನೆರವೇರಿಸಲಾಯಿತು.
ವಾರ್ಷಿಕ ಮಹಾಜಾತ್ರೆಯ 9 ದಇನಗಳ ಮೊದಲು ಗುರುತಿಪ್ಪೇರುದ್ರ‍್ವಾಮಿ ಉತ್ಸವಮೂರ್ತಿಗೆ ಕಂಕಣಧಾರಣೆ ಕಾರ್ಯ ನೆರವೇರಿಸುವುದು ವಾಡಿಕೆಯಾಗಿದೆ. ಅದರಂತೆ ಭಾನುವಾರ ಬೆಳಗಿನಿಂದಲೇ ಒಳಮಠದ ದೇವಾಲಯವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಉತ್ಸವಮೂರ್ತಿಯನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಹಲವು ಪೂಜಾವಿಧಿ ವಿಧಾನಗಳು ಜರುಗಿದವು. ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ದೇವರಿಗೆ ಪುರೋಹಿತ ಮುರಳಿಕೃಷ್ಣ ಕಂಕಣಧಾರಣೆ ನೆರವೇರಿಸಿದರು. ಹಾಗೂ ಜಾತ್ರೆಯು ಸುಗಮವಾಗಿ ನಡೆಯಲು ಬಾಬುದಾರರು, ಸೇವಾಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಕಂಕಣಬದ್ಧರಾಗಿ ಜಾತ್ರೆಯ ಕೆಲಸ ಕಾರ್ಯಗಳಲ್ಲಿ ತೊಡಗುತ್ತೇವೆ ಎಂದು ದೃಢಸಂಕಲ್ಪದಿಂದ ಕಾರ್ಯನಿರ್ವಹಿಸಲು ಕಂಕಣವನ್ನು ಕಟ್ಟಿಸಿಕೊಂಡರು. ಹಾಗೂ ಮಹಾಮಂಗಳಾರತಿ ನಡೆಸಿ ದೇವರ ಉತ್ಸವಮೂರ್ತಿಯಿದ್ದ ಪಲ್ಲಕ್ಕಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ಇದೇವೇಳೆ ನೂರಾರು ಜನ ಮಹಿಳೆಯರು, ಪುರುಷರು, ಮಕ್ಕಳು ಪಲ್ಲಕ್ಕಿಗೆ ಅಡ್ಡಮಲಗಿ ದೇವರಿಗೆ ಹರಕೆ ಅರ್ಪಿಸಿದರು. ಈ ಕಂಕಣಧಾರಣೆ ಕಾರ್ಯದ ಮೂಲಕ ವಾರ್ಷಿಕ ಮಹಾಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.


ಜಾತ್ರೆಯ ಕಾರ್ಯಕ್ರಮದ ವಿವರ:
ಮಾರ್ಚ್ 10ರಂದು ಸೋಮವಾರ ರಾತ್ರಿ ವಾರೋತ್ಸವ ಮತ್ತು ದೇವರನ್ನು ಸರ್ಪವಾಹನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 11ರಂದು ಮಂಗಳವಾರ ರಾತ್ರಿ ಮಯೂರ ವಾಹನೋತ್ಸವ.
ಮಾರ್ಚ್ 12ರಂದು ಬುಧವಾರ ದೊಡ್ಡರಥಕ್ಕೆ ಕಳಸ ಸ್ಥಾಪನೆ ಮತ್ತು ಅಂದು ರಾತ್ರಿ ಗಜವಾಹನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 13ರಂದು ಗುರುವಾರ ಸಿಂಹವಾನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 14ರಂದು ಶುಕ್ರವಾರ ಅಶ್ವವಾಹನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 15ರಂದು ಶನಿವಾರ ರಥಕ್ಕೆ ತೈಲಾಭಿಷೇಕ.
ಮಾರ್ಚ್ 16ರಂದು ಭಾನುವಾರ ಮದ್ಯಾಹ್ನ 3ಗಂಟೆಗೆ ಮುಕ್ತಿಬಾವುಟ ಹರಾಜು ನಂತರ ಚಿತ್ತಾನಕ್ಷತ್ರದಲ್ಲಿ ‘‘ಮಹಾರಥೋತ್ಸವಕ್ಕೆ ಚಾಲನೆ’’.
ಮಾರ್ಚ್ 17ರಂದು ಸೋಮಾರ ರಾತ್ರಿ ದೇವರನ್ನು ಪಾದಗಟ್ಟೆಯ ಬಳಿತಂದು ವಸಂತೋತ್ಸವ ಓಕಳಿ ಕಾರ್ಯ ನೆರವೇರಿಸುವುದು.
ಮಾರ್ಚ್ 24ರಂದು ಸೋಮವಾರ ಮರಿಪರಿಷೆ ಮತ್ತು ವಾರೋತ್ಸವ ನಡೆಸಿ ಜಾತ್ರೆಯನ್ನು ಸಂಪನ್ನಗೊಳಿಸಲಾಗುವುದು.
ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಎಸ್ ಉಮಾಪತಿ, ಸದಸ್ಯರಾದ ಜೆ.ಆರ್.ರವಿಕುಮಾರ್, ಈರಮ್ಮ, ಮಹಾಂತಣ್ಣ, ವಿನುತಾ,
ಅಪರ ಜಿಲ್ಲಾಧಿಕಾರಿ ಬಿಟಿ.ಕುಮಾರಸ್ವಾಮ್ಪಿ, ದೇಗುಲ ಕಾರ್ಯನಿರ್ವಹಣಾಧಿಕಾರಿ ಹೆಚ್.ಗಂಗಾಧರಪ್ಪ, ಸತೀಶ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಜೆಪಿ.ರವಿಶಂಕರ್, ಎಂ.ವೈ.ಟಿ.ಸ್ವಾಮಿ, ಮುಖಂಡರಾದ ಪಟೇಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಕೆಎಂ ತಿಪ್ಪೇರುದ್ರಪ್ಪ, ರುದ್ರಮುನಿ, ಉಮೇಶ್, ಪಿ.ಯು.ಸುನೀಲ್ ಕುಮಾರ್, ಸೇರಿದಂತೆ ನೂರಾರು ಭಕ್ತರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading