ಜನಧ್ವನಿ ನ್ಯೂಸ್ ವರದಿ ಫಲಿತಾಂಶ: ರೈತನ ನೆರವಿಗೆ ಮುಂದಾದ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದಸ್ವಾಮೀಜಿ
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ನಷ್ಟವಾದ ಕುರಿತು ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಪಾವಗಡದ ಜಪಾನಂದಸ್ವಾಮೀಜಿ ದೂರವಾಣಿ ಮೂಲಕ ಜನಧ್ವನಿ ನ್ಯೂಸ್ ಸಂಪರ್ಕಿಸಿ ರೈತನ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ರೈತರು ಮತ್ತು ಜಾನುವಾರುಗಳ ಪಾಲನೆ-ಪೋಷಣೆಯ ಕಷ್ಟವನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಬೆಂಕಿ ಅವಘಡದಿಂದ ಉಂಟಾದ ನಷ್ಟದ ಬಗ್ಗೆ ವರದಿ ನೋಡಿ ಮನಸ್ಸಿಗೆ ಬೇಸರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಗೋಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತನ ಜಾನುವಾರುಗಳಿಗೆ ಮೇವು ಸರಬರಾಜು ಮಾಡುವುದಾಗಿ ಪಾವಗಡ ಜಪಾನಂದಸ್ವಾಮೀಜಿ ಭರವಸೆ ನೀಡಿದ್ದಾರೆ.
ಜನಧ್ವನಿ ನ್ಯೂಸ್ ವರದಿಯಿಂದ ರೈತನ ಸಂಕಷ್ಟಕ್ಕೆ ಸ್ಪಂದನೆ ದೊರೆತಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
About The Author
Discover more from JANADHWANI NEWS
Subscribe to get the latest posts sent to your email.