ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಯ ದೊಡ್ಡ ರಥೋತ್ಸವ ಕೇವಲ ಒಂದು ವಾರ ಉಳಿದಿದೆ ಜಾತ್ರೆಯ ಪ್ರಯುಕ್ತ ರಸ್ತೆ ಚರಂಡಿ ವಿದ್ಯುತ್ ಕುಡಿಯುವ ನೀರು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಹೇಗೆ ಸಾಧ್ಯ ಎಂದು ಪಟ್ಟಣದ ಮುಸ್ಲಿಂ ಮುಖಂಡ ಕೌಸರ್ ಆರೋಪಿಸಿದ್ದಾರೆ.
ಶನಿವಾರ ಪಟ್ಟಣದ ಪಾದಗಟ್ಟೆ ಹತ್ತಿರದ ರಸ್ತೆಯ ತರಾತುರಿಯಿಂದ ಮಾಡುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತಾದಿಗಳು ಜಾತ್ರೆಗೆ ಆಗಮಿಸುತ್ತಾರೆ.




ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಅನುದಾನ ನೀಡಿದ್ದಾರೆ. ಪಟ್ಟಣದ ಅಭಿವೃದ್ಧಿ ಕೆಲಸಗಳು ಆಗುತ್ತಿವೆ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಒಂದೇ ವಾರದಲ್ಲಿ ಎಲ್ಲಾ ಕಾಮಗಾರಿಗಳು ಕೈಗೊತ್ತಿಕೊಂಡಿರುವುದು ಇದು ತರಾತುರಿ ಇಂದ ಮಾಡುತ್ತಿರುವ ಕಾಮಗಾರಿಯಾಗಿದ್ದು ಗುಣಮಟ್ಟದಿಂದ ಕೂಡಿರಲು ಸಾಧ್ಯವಿಲ್ಲ. ಶಾಸಕರು ಅನುದಾನವನ್ನ ಮೂರು ತಿಂಗಳ ಮುಂಚೆ ನೀಡಿದ್ದರೆ ಒಂದು ಎರಡು ತಿಂಗಳ ಕಾಲ ಅವಕಾಶ ಇರುತ್ತಿತ್ತು.ಉತ್ತಮವಾಗಿ ಕಾಮಗಾರಿಗಳು ಮಾಡಲು ಅನುಕೂಲವಾಗುತಿತ್ತು ಈ ರೀತಿ ಕಾಮಗಾರಿಗಳು ಮಾಡುವುದರಿಂದ ರಸ್ತೆ ಚರಂಡಿ ಗುಣಮಟ್ಟದಿಂದ ಕೂಡಿರಲು ಹೇಗೆ ಸಾಧ್ಯ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣ ಪಂಚಾಯತಿ ಅಧಿಕಾರಿಗಳು ರಾತ್ರಿ ಬೋರ್ ಹಾಕಿಸುತ್ತಾರೆ. ಬೆಳಗ್ಗೆ ಮೋಟಾರ್ ಅಳವಡಿಸುತ್ತಾರೆ ಇನ್ನು ಕೇವಲ 8 ದಿನಗಳು ಮಾತ್ರ ರಥೋತ್ಸವಕ್ಕೆ ಬಾಕಿ ಉಳಿದಿದೆ ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳಿಸುವರೇ? ಪಟ್ಟಣದ ಅಭಿವೃದ್ಧಿ ಮಾಡಲಿ ಆದರೆ ಅವಸರದ ಕಾಮಗಾರಿ ಏತಕ್ಕಾಗಿ? ಈಗ ಮಾಡುವ ಕೆಲಸ ಮೂರು ತಿಂಗಳು ಮುಂಚೆ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು. ಅವಸರದ ಕಾಮಗಾರಿಯಿಂದ ಕಳಪೆ ಕಾಮಗಾರಿಯಾಗುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದರು.
About The Author
Discover more from JANADHWANI NEWS
Subscribe to get the latest posts sent to your email.